

ಬೆಂಗಳೂರು: ಕೆಂಗೇರಿಯಿಂದ ಚಲ್ಲಘಟ್ಟ ಮಾರ್ಗದಲ್ಲಿನ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಮಾರ್ಗದ ಕಂಬದಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಜರಾಜೇಶ್ವರಿ ಆಸ್ಪತ್ರೆ ಬಳಿ ನಿರ್ವಿುಸಲಾಗಿರುವ ಕಂಬದ ಮೇಲೆ ಅಳವಡಿಸಲಾದ ವಯಾಡಕ್ಟ್ನ ಕೆಳಭಾಗದಲ್ಲಿನ ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಕಾಣುತ್ತಿವೆ. ಇದು ಕಾಮಗಾರಿ ಪೂರ್ಣ ಗೊಳ್ಳುವುದಕ್ಕೂ ಮುನ್ನವೇ ಈ ರೀತಿ ವಯಾಡಕ್ಸ್ ನಲ್ಲಿ ಬಿರುಕು ಕಾಣಿಸಿಕೊಂಡಿರುವುದು ಭಾರಿ ಚರ್ಚೆಗೆ ಗ್ರಾಸ
ವಾಗಿದೆ.
ಈಗಲೇ ಹೀಗಾದರೆ, ಕಾಮಗಾರಿ ಪೂರ್ಣಗೊಂಡು ಸೇವೆ ಆರಂಭವಾದ ನಂತರ ಜನರ ಸುರಕ್ಷತೆ ಹೇಗೆ ಎಂಬ ಪ್ರಶ್ನೆಯೂ ಉದ್ಭವವಾಗುವಂತಾಗಿದೆ. ಬಿಎಂಆರ್ಸಿಎಲ್ ಅಧಿಕಾರಿಗಳು ಈ ಬಿರುಕಿನ ಸುದ್ದಿಯನ್ನು ಅಲ್ಲಗಳೆದಿದ್ದು, ಈಗಾಗಲೆ ತಜ್ಞರು ಬಿರುಕು ಬಿಟ್ಟ ಸ್ಥಳವನ್ನು ಪರಿಶೀಲಿಸಿದ್ದಾರೆ.
ವಯಾಡಕ್ಟ್ನಲ್ಲಿ ಸಿಮೆಂಟ್ ಬಿದ್ದಿರುವುದರಿಂದ ಯಾವುದೇ ಲೋಪವಾಗುವುದಿಲ್ಲ.ಅಲ್ಲಿ ಆಗಿರುವ ಹಾನಿ ಯನ್ನು ಸರಿಪಡಿಸಲಾಗುವುದು. ಸೇವೆ ನಂತರ ಅದರಿಂದ ಯಾವುದೇ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಹೇಳಿದ್ದಾರೆ.