

ಫೋರ್ಟ್ ಆಫ್ ಸ್ಪೇನ್: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಸೇಂಟ್ ಕಿಟ್ಸ್ ಹಾಗೂ ನೆವಿಸ್ ಪೇಟ್ರಿಯಾಟ್ಸ್ ತಂಡ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿತು. ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎವಿನ್ ಲೇವಿಸ್ (89ರನ್, 60 ಎಸೆತ, 2 ಬೌಂಡರಿ, 9 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪೇಟ್ರಿಯಾಟ್ಸ್ ತಂಡ 6 ವಿಕೆಟ್ಗಳಿಂದ ಬಾರ್ಬಡೊಸ್ ಟ್ರಿಡೆಂಟ್ಸ್ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಬಾರ್ಬಡೊಸ್ 7 ವಿಕೆಟ್ಗೆ 151 ರನ್ಗಳಿಸಿದರೆ, ಪೇಟ್ರಿಯಾಟ್ಸ್ ತಂಡ 19.3 ಓವರ್ಗಳಲ್ಲಿ 4 ವಿಕೆಟ್ಗೆ 152 ರನ್ಗಳಿಸಿ ಜಯದ ನಗೆ ಬೀರಿತು. ದಿನದ ಮತ್ತೊಂದು ಪಂದ್ಯದಲ್ಲಿ ಜಮೈಕಾ ತಲ್ಲಾವಾಹ್ಸ ತಂಡ 5 ವಿಕೆಟ್ಗಳಿಂದ ಗಯಾನ ಅಮೆಜಾನ್ ವಾರಿಯರ್ಸ್ ತಂಡವನ್ನು ಸೋಲಿಸಿತು.
ಬಾರ್ಬಡೊಸ್ ಟ್ರಿಡೆಂಟ್ಸ್: 7 ವಿಕೆಟ್ಗೆ 151 (ಶೈ ಹೋಪ್ 29, ಚಾರ್ಲ್ಸ್ 24, ಕೋರಿ ಆಂಡರ್ಸನ್ 31, ಜಾನ್ ಜಗ್ಗೆಸರ್ 17ಕ್ಕೆ 2), ಸೇಂಟ್ ಕಿಟ್ಸ್ ಹಾಗೂ ನೆವಿಸ್ ಪೇಟ್ರಿಯಾಟ್ಸ್ : 19.3 ಓವರ್ಗಳಲ್ಲಿ 4 ವಿಕೆಟ್ಗೆ 152 (ಲೆವಿಸ್ 89, ಡಂಕ್ 22 ಅಜೇಯ, ಕೈಲೆ ಮೇಯೆರ್ಸ್ 14ಕ್ಕೆ 2).