ಕಾರವಾರ: ಹೊನ್ನಾವರ ಗೋ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯನ್ನುಹೊನ್ನಾವರ ಪೋಲಿಸರು ಶುಕ್ರವಾರ ಬಂಧಿಸಿದ್ದಾರೆ.
ಹೊನ್ನಾವರ ವಲ್ಕಿಯ, ತೌಫಿಕ್ ಅಹಮದ್ ಜಿದ್ದಾ ಬಂಧಿತ ಆರೋಪಿ.ಆತನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜ. 18 ಹೊನ್ನಾವರದ ಕೊಂಡಾಕುಳಿಯ ಕೃಷ್ಣ ಆಚಾರಿ ಅವರು, ಮೇಯಲು ಬಿಟ್ಟ ಗರ್ಭಿಣಿ ಹಸುವಿನ ತಲೆ ಕಡಿದು, ಹೊಟ್ಟೆಯಲ್ಲಿದ್ದ ಕರುವನ್ನು ಎಸೆದು ಯಾರೋ ಹೋಗಿದ್ದರು. ಹೊನ್ನಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಗೋಹತ್ಯೆ ಪ್ರಕರಣದ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ , ಎಸ್ ಪಿ ಎಂ. ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳಿಯರ ಜೊತೆ ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಹೊಸಕುಳಿ, ಕವಲಕ್ಕಿ ಭಾಗದಲ್ಲಿ ಇನ್ನು ಕೆಲವು ಗೋವುಗಳ ಕಳ್ಳತನವಾಗಿರುವಿದು ಬೆಳಕಿಗೆ ಬಂದಿತ್ತು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಪೋಲಿಸರು, ಗುರುವಾರ ಮೂವರು ಗೋ ಕಳ್ಳರನ್ನು ಬಂಧಿಸಿದ್ದಾರು. ಶುಕ್ರವಾರ ಗೋ ಹಂತಕನ ಬಂಧನವಾಗಿದ್ದು, ಇನ್ನು ಕೆಲವು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.