ಜಪಾನ್‌ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ವರವಾಯ್ತು 'ಸಗಣಿ'?: ಇದೇ ಮೊದಲಬಾರಿಗೆ ರಾಕೆಟ್ ಇಂಜಿನ್​ಗೆ 'ಬಯೋಗ್ಯಾಸ್' ಬಳಕೆ!

Cow dung
Published on

ಟೈಕಿ(ಜಪಾನ್) ಹಿಂದೂ ಧರ್ಮವು ಪವಿತ್ರವೆಂದು ಭಾವಿಸುವ ಗೋಮೂತ್ರ - ಸಗಣಿಯನ್ನು ಯಾವಯಾವುದಕ್ಕೋ ಹೋಲಿಕೆ ಮಾಡುವ ಮತಿಗೇಡಿಗಳಿಗೆ ಭಾರತದಲ್ಲಿ ಕಡಿಮೆಯಿಲ್ಲ. ಆದರೆ ನಮ್ಮದೇ ನೆಲದ ಭೌದ್ಧ ಧರ್ಮವನ್ನು ತನ್ನದಾಗಿಸಿಕೊಂಡಿರುವ ಮಿತ್ರ ಜಪಾನ್​ ಸಗಣಿ ಮಹತ್ವವನ್ನು ವಿಶ್ವಕ್ಕೆ ಸಾರಿದೆ. ವಿವರ ಇಲ್ಕ್ಕೆಲಿದೆ...

ಹೌದು, ಅನುಕರಣೆ ಮಾಡದೆ, ಕಷ್ಟಪಟ್ಟು ಜಗತ್ತೇ ನಿಬ್ಬೆರಗಾಗುವಂಥ ಸಾಧನೆ ಮಾಡುತ್ತ ಬಂದಿರುವ ಪುಟ್ಟ ದೇಶ ಜಪಾನ್‌ ಬಾಹ್ಯಾಕಾಶ ಉದ್ಯಮದಲ್ಲಿ ಹೊಸ ಅಧ್ಯಾಯನವೊಂದಕ್ಕೆ ನಾಂದಿ ಹಾಡಿದೆ. ಮೂಲಮಾದರಿಯ ರಾಕೆಟ್ ಎಂಜಿನ್​ ಅನ್ನು ಹಸುವಿನ ಸಗಣಿಯಿಂದ ಪಡೆದ ಇಂಧನ ಬಳಸಿ ಆಗಸಕ್ಕೆ ಉಡಾಯಿಸುವ ಮೂಲಕ ಪರೀಕ್ಷೆಗೊಳಪಡಿಸಿ ಸಂಪೂರ್ಣ ಯಶಸ್ಸು ಕಂಡಿದೆ. ಇದು ವಿಶ್ವವನ್ನು ನಿಬ್ಬೆರರಾಗಿಸುವಂತೆ ಮಾಡಿದೆ.

ಈ ಪ್ರಯೋಗವು ಜಪಾನ್​ನ ಟೈಕಿಯಲ್ಲಿ ನಡೆದಿದೆ. ಹಸುವಿನ ಸಗಣಿ ಹಾಗೂ ಇತರ ಕೊಳೆಯುವ ವಸ್ತುಗಳಿಂದ ಜೈವಿಕ ಇಂಧನ ತಯಾರು ಮಾಡುವುದು ಭಾರತ ಸೇರಿದಂತೆ ಜಗತ್ತಿಗೇ ತಿಳಿದ ಸಂಗತಿ. ಆದರ ಸಗಣಿಯಿಂದ ತಯಾರಿಸಿದ ಜೈವಿಕ ಇಂಧನ ಬಳಸಿ ದಕ್ಷಿಣ ಜಪಾನ್‌ನ ಕಾಗೋಶಿಮಾದ ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದ ಉಡಾವಣಾ ಪ್ಯಾಡ್‌ನಿಂದ ಎಚ್​-II-ಎ ರಾಕೆಟ್ ಇಂಜಿನ್​ ಪರೀಕ್ಷಾರ್ಥ ಉಡಾಯಿಸಿರುವುದು ಇದೇ ಮೊದಲಾಗಿದೆ.

ಸುಮಾರು 10 ಸೆಕೆಂಡ್ ಕಾಲ 10 ರಿಂದ 15 ಮೀಟರ್​ ಅಡ್ಡಗಲದ ನೀಲಿ-ಕಿತ್ತಳೆ ಜ್ವಾಲೆ ಹೊರ ಸೂಸುತ್ತ ರಾಕೆಟ್​ ಎಂಜಿನ್ ಮೇಲೇರಲು ಸ್ಫೋಟಿಸಿತು.ಇಂಟರ್ ಸ್ಟೆಲ್ಲರ್ ಟೆಕ್ನಾಲಜೀಸ್ ಮುಖ್ಯ ಕಾರ್ಯನಿರ್ವಾಹಕ ತಕಹಿರೊ ಇನಗಾವಾ ಅವರ ಪ್ರಕಾರ, ಅಗತ್ಯವಿರುವ ದ್ರವ "ಬಯೋಮಿಥೇನ್" ಅನ್ನು ಎರಡು ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಹಸುವಿನ(ಸಗಣಿ) ಗೊಬ್ಬರದಿಂದ ಪಡೆದ ಅನಿಲವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ವಿವರಿಸಿದರು.

"ಪರಿಸರಕ್ಕೆ ಹಾನಿಯಾಗುವುದನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುತ್ತಿದ್ದೇವೆ. ಸ್ಥಳೀಯವಾಗಿ ಉತ್ಪಾದಿಸಬಹುದಾದ ಕಾರಣ ಇದು ಕಡಿಮೆ ವೆಚ್ಚದಲ್ಲಿ, ಪರಿಣಾಮಕಾರಿಯಾಗಿ ತಯಾರಿಸಬಹುದಾದ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಶುದ್ಧತೆಯನ್ನು ಹೊಂದಿರುವ ಇಂಧನವಾಗಿದೆ. ಸಗಣಿಯಿಂದ ಸಿಗುವ ಬಯೋಮಿಥೇನ್ ಇಂಧನವನ್ನು ಬಳಸಿಕೊಂಡು ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಉಡಾಯಿಸಲು ಸಾಧ್ಯವಾಗುತ್ತದೆ" ಎಂದು ಅವರು ತಿಳಿಸಿದರು.

ಗೋ ಮೂತ್ರ ಮತ್ತು ಸಗಣಿ ತುಂಬಾ ಸಾಮರ್ಥ್ಯ ಹೊಂದಿದೆ. ಅಂತರಾಷ್ಟ್ರೀಯ ವ್ಯವಹಾರಗಳಲ್ಲಿ ಏನಾದರೂ ಬದಲಾವಣೆಯಾಗಬೇಕಾದರೆ, ಜಪಾನ್ ಈಗಾಗಲೇ ತನ್ನಲ್ಲಿನ ಇಂತಹ ಶಕ್ತಿಯ ಮೂಲಗಳನ್ನು ಹೊಂದುವುದು ಮುಖ್ಯವಾಗಿದೆ. ನಮ್ಮ ಹಸುವಿನ ತ್ಯಾಜ್ಯ ಹಾರಲು ಬಳಸಬಹುದೆಂಬುದು ಯೋಚಿಸಲು ನಾನು ಉತ್ಸುಕನಾಗಿದ್ದೇನೆ" ಎಂದು ಏರ್ ವಾಟರ್‌ ಸಂಸ್ಥೆ ಇಜಿನಿಯರ್ ಟೊಮೊಹಿರೊ ನಿಶಿಕಾವಾ ಹೇಳಿದರು.

ಜಪಾನ್ ಮೂರು ಬಾರಿ ಚಂದ್ರನ ಲ್ಯಾಂಡರ್ ಅನ್ನು ಹೊತ್ತ ರಾಕೆಟ್ ಉಡಾವಣೆ ಮಾಡಿದೆ. ಜಪಾನ್‌ನ ಬಾಹ್ಯಾಕಾಶ ಸಂಸ್ಥೆ ಜೆಎಎಕ್ಸ್​ಎ ತನ್ನ "ಮೂನ್ ಸ್ನೈಪರ್" ಮಿಷನ್ ಅನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಎರಡು ವಿಫಲ ಕಾರ್ಯಾಚರಣೆಗಳೊಂದಿಗೆ ಕುಗ್ಗಿಹೋಗಿದೆ. ಮಾರ್ಚ್‌ನಲ್ಲಿ ಮುಂದಿನ ಪೀಳಿಗೆಯ ಎಚ್​3 ಉಡಾಯಿಸಬೇಕಿದೆ. ಜುಲೈನಲ್ಲಿ ಎಪ್ಸಿಲಾನ್‌ನ ಸುಧಾರಿತ ಆವೃತ್ತಿಯಾದ ಎಪ್ಸಿಲಾನ್ ಎಸ್ ರಾಕೆಟ್‌ನ ಪರೀಕ್ಷೆಯು ದಹನದ 50 ಸೆಕೆಂಡುಗಳ ನಂತರ ಯಶಸ್ವಿ ಸ್ಫೋಟದಲ್ಲಿ ಕೊನೆಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net