ಸ್ಮಾರ್ಟ್ ‌ಫೋನ್ ಬಳಕೆಯಿಂದ ಕರೊನಾ ಬಂದ ರೋಗಿಗಳು ಮೃತಪಡುತ್ತಿದ್ದಾರೆ ಎಂದ ಶಾಸಕ!

basavaraj dadesuguru 2
Published on

ಕೊಪ್ಪಳ: ಸ್ಮಾರ್ಟ್ ‌ಫೋನ್ ಬಳಕೆಯಿಂದ ಕರೊನಾ ಬಂದ ರೋಗಿಗಳು ಮೃತಪಡುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲೆ ಕನಕಗಿರಿ ಶಾಸಕ ಬಸವರಾಜ ದಡೆಸುಗೂರ ಹೇಳಿದ್ದಾರೆ.

ಶನಿವಾರ ಗಂಗಾವತಿಯ ಕೋವಿಡ್19 ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅನೌಪಚಾರಿಕವಾಗಿ ವೈದ್ಯರೊಂದಿಗೆ ಮಾತನಾಡಿದ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ.

ಚಿಕಿತ್ಸೆ ಪಡೆಯುತ್ತಿರುವ ಕರೋನ ರೋಗಿಗಳಿಗೆ ಸ್ಮಾರ್ಟ್ ಫೋನ್ ಬಳಕೆ ನಿಷೇಧಿಸಬೇಕು. ಆಗ ಮಾತ್ರ ರೋಗಿಗಳು ಗುಣಮುಖ ಆಗುತ್ತಾರೆ. ಸ್ಮಾರ್ಟ್ ‌ಫೋನ್ ನಲ್ಲಿ ಕರೊನಾಕ್ಕೆ ಸಂಬಂಧಿಸಿದ ಸುದ್ದಿಗಳನ್ನು, ಸಾವು ನೋವು ನೋಡಿ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾರೆ. ಹೀಗಾಗಿ ಭಯದಿಂದ ಕರೊನಾ ರೋಗಿಗಳು ಮೃತಪಡುತ್ತಿದ್ದಾರೆ ಎಂದ ಶಾಸಕ ದಡೆಸುಗೂರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net