ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆಯ ನಡುವೆ ಹೊಸದಾಗಿ 2062 ಕೋವಿಡ್ 19 ಕೇಸ್ಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ ಒಟ್ಟು 54 ಮರಣ ಸಂಭವಿಸಿದೆ. ಆಸ್ಪತ್ರೆಯಿಂದ 778 ಜನ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.
ಹೊಸ 2062 ಕೋವಿಡ್ 19 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಇದುವರೆಗೆ ಒಟ್ಟು 28,877 ಕೇಸ್ಗಳು ದೃಢಪಟ್ಟಂತಾಗಿವೆ. ಮರಣ ಪ್ರಮಾಣ ಒಟ್ಟು 470ಕ್ಕೆ ತಲುಪಿದೆ. ಈ ಪೈಕಿ ನಾಲ್ಕು ಮರಣ ಅನ್ಯ ಕಾರಣದಿಂದ ಸಂಭವಿಸಿದೆ. ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆಯಾದವರ ಸಂಖ್ಯೆ 11,876 ಆಗಿದೆ. ಸದ್ಯ ಐಸಿಯುನಲ್ಲಿ 452 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾ ಮಟ್ಟದ ಡೇಟಾ ಗಮನಿಸಿದರೆ ಬೆಂಗಳೂರು ನಗರ ಮುಂಚೂಣಿಯಲ್ಲೇ ಇದ್ದು, ಇಂದು 1148 ಕೇಸ್ಗಳು ಖಚಿತವಾಗಿವೆ. ಟಾಪ್ ಐದರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಎರಡನೇ ಸ್ಥಾನದಲ್ಲಿದ್ದು 183 ಹೊಸ ಕೇಸ್ಗಳು ಕಂಡುಬಂದಿವೆ. ಧಾರವಾಡ 89, ಕಲಬುರಗಿ 66, ಬಳ್ಳಾರಿ 59, ಮೈಸೂರು 59 ಕೇಸ್ಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಒಟ್ಟು ಕೇಸ್ಗಳ ಸಂಖ್ಯೆ ಗಮನಿಸಿದರೆ ಬೆಂಗಳೂರು ಅಗ್ರಸ್ಥಾನದಲ್ಲಿದ್ದು, ಒಟ್ಟು ಕೇಸ್ಗಳ ಸಂಖ್ಯೆ 12,509ಕ್ಕೆ ತಲುಪಿದೆ. ಕಲಬರುಗಿ 1816, ದಕ್ಷಿಣ ಕನ್ನಡ 1534, ಬಳ್ಳಾರಿ 1447, ಉಡುಪಿ 1420 ಕೇಸ್ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.