More

    ಸ್ಟಾಪ್​ ಕಮ್ಯೂನಿಸ್ಟ್ ಚೀನಾ ಅಭಿಯಾನಕ್ಕೆ ಚಾಲನೆ ನೀಡಿದ ನಿಕ್ಕಿ ಹ್ಯಾಲೆ…

    ವಾಷಿಂಗ್ಟನ್​: ಅಮೆರಿಕದಲ್ಲಿ ಅಪಾರ ಸಾವು, ನೋವು ಮತ್ತು ಆರ್ಥಿಕ ನಷ್ಟವನ್ನು ಉಂಟುಮಾಡಿರುವ ಕರೊನಾ ವೈರಸ್​ COVID19 ವಿಚಾರವನ್ನು ಮರೆಮಾಚಿದಕ್ಕಾಗಿ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧದ ಆಕ್ರೋಶ ತೀವ್ರಗೊಳ್ಳುತ್ತಿದೆ. ಸುಳ್ಳು ಹೇಳಿ ವಾಸ್ತವಾಂಶ ಮರೆಮಾಚಿದ್ದಕ್ಕಾಗಿ ಇಂಡಿಯನ್ ಅಮೆರಿಕನ್ ರಾಜಕಾರಣಿ ನಿಕ್ಕಿ ಹ್ಯಾಲೆ ಶುಕ್ರವಾರ ರಾತ್ರಿ ವಾಷಿಂಗ್ಟನ್​ನಲ್ಲಿ ಸ್ಟಾಪ್ ಕಮ್ಯೂನಿಸ್ಟ್ ಚೀನಾ ಎಂಬ ಆನ್​ಲೈನ್ ಕ್ಯಾಂಪೇನ್​ಗೆ ಚಾಲನೆ ನೀಡಿದ್ದಾರೆ.

    ಈ ಅಭಿಯಾನಕ್ಕೆ ಭಾರಿ ಪ್ರತಿಕ್ರಿಯೆ ಸಿಕ್ಕಿದ್ದು ಕೆಲವೇ ಗಂಟೆಗಳ ಅವಧಿಯಲ್ಲಿ 40,000ಕ್ಕೂ ಹೆಚ್ಚು ಸಹಿಸಂಗ್ರಹವಾಗಿದೆ. ಒಂದು ಲಕ್ಷ ಜನರ ಸಹಿ ಸಂಗ್ರಹಿಸಿ ಈ ಕುರಿತು ಕ್ರಮ ತೆಗೆದುಕೊಳ್ಳುವಂತೆ ಅಮೆರಿಕ ಸರ್ಕಾರವನ್ನು ಆಗ್ರಹಿಸುವುದು ನಿಕ್ಕಿ ಹ್ಯಾಲೆ ಉದ್ದೇಶ. ಭಾರಿ ಅನಾಹುತಕಾರಿ ಸಾಂಕ್ರಾಮಿಕ ರೋಗದ ವಿಚಾರವಾಗಿ ಸುಳ್ಳು ಹೇಳುತ್ತಿರುವ ಚೀನಾದ ಕಮ್ಯೂನಿಸ್ಟ್ ಸರ್ಕಾರವೇ ಇದರ ನಾಶ ನಷ್ಟಗಳಿಗೆ ಹೊಣೆಗಾರನಾಗಬೇಕು. ಅಮೆರಿಕನ್ ಕಾಂಗ್ರೆಸ್ ಈಗ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಮೂಡಲಿದೆ ಎಂದು ನಿಕ್ಕಿ ಹ್ಯಾಲೆ ಹೇಳಿಕೊಂಡಿದ್ದಾರೆ.

    ಒಂದೇ ಆಸ್ಪತ್ರೆಯ 31 ಸಿಬ್ಬಂದಿಗೆ COVID19 ಪಾಸಿಟಿವ್​! :ನಿಖರ ಕಾರಣ ಇನ್ನೂ ತಿಳಿದಿಲ್ಲ…

    ಈ ಅಭಿಯಾನದಲ್ಲಿ ಕೈ ಜೋಡಿಸಿ. ಇದಕ್ಕೆ ಅಮೆರಿಕದಿಂದಷ್ಟೇ ಅಲ್ಲ ಹೊರದೇಶಗಳಿಂದಲೂ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿರುವ ಹ್ಯಾಲೆ, ಅಮೆರಿಕವನ್ನು ಮುಗಿಸಲೆಂದೇ ಚೀನಾ ಸಂಚು ರೂಪಿಸಿದ್ದು, ಅದರ ಭಾಗವೇ ಈ ಸಾಂಕ್ರಾಮಿಕ ರೋಗ ಎಂದು ಪ್ರತಿಪಾದಿಸಿದ್ದಾರೆ. ಅಲ್ಲದೆ, ಈಗ ಜನರಿಂದ ಸಹಿ ಹಾಕಿಸುತ್ತಿರುವ ಅಭಿಯಾನದ ಪ್ರತಿಯಲ್ಲಿ ತೈವಾನ್ ವಿಚಾರವನ್ನೂ ಅವರು ಉಲ್ಲೇಖಿಸಿದ್ದಾರೆ. ವಿಶ್ವ ಸಂಸ್ಥೆಗೆ ಚೀನಾ ಸರಿಯಾದ ಪಾಲು ಒದಗಿಸಬೇಕು. ಅಲ್ಲದೆ, ಅಮೆರಿಕದಲ್ಲಿರುವ ವಿವಿಧ ಕಾಲೇಜುಗಳು ಚೀನಾದಿಂದ ಪಡೆಯುತ್ತಿರುವ ಅನುದಾನ ಎಷ್ಟು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಲಾಗಿದೆ.

    ವಿಶ್ವಸಂಸ್ಥೆ ಕೆಲಸ ಆರಂಭಿಸುತ್ತಿದ್ದಂತೆಯೇ ಅಮೆರಿಕ ಕೂಡಲೇ ತುರ್ತು ಸೆಕ್ಯುರಿಟಿ ಕೌನ್ಸಿಲ್ ಮೀಟಿಂಗ್​ಗೆ ಆಗ್ರಹಿಸಲಿದೆ. ಅದರಲ್ಲಿ ಕೋವಿಡ್​ 19ನಲ್ಲಿ ಚೀನಾದ ಕೈವಾಡ ಮತ್ತು ವೈರಸ್ ಕುರಿತ ಅದರ ತಿಳಿವಳಿಕೆ ವಿಚಾರವೇ ಪ್ರಮುಖ ಅಜೆಂಡಾ ಆಗಿರಲಿದೆ ಎಂದೂ ನಿಕ್ಕಿ ಹ್ಯಾಲೆ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆಯಲ್ಲಿನ ಚೀನೀ ರಾಯಭಾರಿ ಝಂಗ್​ ಜುನ್​, ಈ ಸಾಂಕ್ರಾಮಿಕ ರೋಗದ ವಿಚಾರದಲ್ಲಿ ಚೀನಾ ಯಾವುದನ್ನೂ ಮುಚ್ಚುಮರೆ ಮಾಡಿಲ್ಲ ಎಂದು ರಕ್ಷಣಾತ್ಮಕ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್​)

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts