More

    ಒಂದೇ ಆಸ್ಪತ್ರೆಯ 31 ಸಿಬ್ಬಂದಿಗೆ COVID19 ಪಾಸಿಟಿವ್​! :ನಿಖರ ಕಾರಣ ಇನ್ನೂ ತಿಳಿದಿಲ್ಲ…

    ನವದೆಹಲಿ: ಬಾಬು ಜಗಜೀವನ್​ರಾಮ್​ ಆಸ್ಪತ್ರೆಯ 11 ಡಾಕ್ಟರ್​ಗಳು ಸೇರಿ 31 ಸಿಬ್ಬಂದಿಗೆ ಕೋವಿಡ್ 19 ಟೆಸ್ಟ್​ನಲ್ಲಿ ಪಾಸಿಟಿವ್​ ಬಂದಿದೆ. ಎಲ್​ಎನ್​ಜೆಪಿ ಆಸ್ಪತ್ರೆ, ರಾಜೀವ್ ಗಾಂಧಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಇವರೆನ್ನೆಲ್ಲ ದಾಖಲಿಸಲಾಗಿದೆ. ಇನ್ನೂ ಕೆಲವರಿಗೆ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ಗುರುವಾರದ ತನಕ ಏಳು ಡಾಕ್ಟರ್​ಗಳು ಮತ್ತು ಏಳು ಇತರೆ ಸ್ಟಾಫ್​​ಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಈ ಸಂಖ್ಯೆ ಈಗ 31ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈ ರೀತಿ ತ್ವರಿತವಾಗಿ ಸೋಂಕು ಹರಡುವುದಕ್ಕೆ ಕಾರಣ ಉತ್ತರ ದೆಹಲಿಯ ಜಹಾಂಗಿರ್​ಪುರಿ ಪ್ರದೇಶದಲ್ಲಿನ ಕಮ್ಯೂನಿಟಿ ಟ್ರಾನ್ಸ್​ಮಿಷನ್ ಆಗಿರಲೂ ಬಹುದು.ಅಲ್ಲಿ ಅನೇಕ ಪ್ರದೇಶಗಳನ್ನು ಕಂಟೇನ್​ಮೆಂಟ್ ಝೋನ್ ಎಂದು ಗುರುತಿಸಲಾಗಿದೆ.ಈ ಆಸ್ಪತ್ರೆಗೆ ಬರುವ ಬಹುತೇಕರಲ್ಲಿ ಯಾವುದೇ ಗುಣಲಕ್ಷಣಗಳಿರುವುದು ಕಂಡುಬಂದಿಲ್ಲ.ಹೀಗಾಗಿ ಇದು ಸೋಂಕು ಹರಡುವುದಕ್ಕೆ ಕಾರಣವೂ ಆಗಿರಬಹುದು.

    ಶುಕ್ರವಾರ ಡಾಕ್ಟರ್​ಗಳಿಗೆ ಹೊರತಾಗಿ, ನರ್ಸ್​ಗಳು, ಅರೆವೈದ್ಯಕೀಯ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ಸ್​, ಡೆಸ್ಕ್​ಪರ್ಸನ್​​ಗಳಿಗೆ ಸೋಂಕು ದೃಢಪಟ್ಟಿದೆ. ಈ ಆಸ್ಪತ್ರೆಯಲ್ಲಿ ಮೊದಲ ಪಾಸಿಟಿವ್ ಕೇಸ್​ ಖಚಿವಾದುದು ಏಪ್ರಿಲ್​ 22ರಂದು. ಅಂದು ಸಿಬ್ಬಂದಿಯನ್ನು ಈ ಟೆಸ್ಟ್​ಗೆ ಒಳಪಡಿಸಲಾಗಿತ್ತು. ಕಳೆದ ಕೆಲವು ದಿನಗಳ ಅವಧಿಯಲ್ಲಿ ಒಟ್ಟು 350 ಸಿಬ್ಬಂದಿಯನ್ನು ಈ ಟೆಸ್ಟ್​ಗೆ ಒಳಪಡಿಸಲಾಗಿದೆ.ಈ ಪೈಕಿ 31 ಜನರ ವರದಿ ಪಾಸಿಟಿವ್ ಬಂದಿದೆ. (ಏಜೆನ್ಸೀಸ್​)

    50,000 ದಾಟಿತು ಅಮೆರಿಕದಲ್ಲಿ COVID19 ಸಾವಿನ ಸಂಖ್ಯೆ, ನ್ಯೂಯಾರ್ಕ್ ಪರಿಸ್ಥಿತಿ ಶೋಚನೀಯ

    ಲೇಸ್​ ಬ್ರಾ ಆಕಾರದ ಫೇಸ್​ಮಾಸ್ಕ್​ಗಳಿಗೆ ಜಪಾನಿನಲ್ಲಿ ಭಾರಿ ಬೇಡಿಕೆ- ಮಾರುಕಟ್ಟೆ ಬಂದ ಕೆಲವೇ ನಿಮಿಷಗಳಲ್ಲಿ ಸ್ಟಾಕ್ ಖಾಲಿ!

    ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts