ಕರ್ನಾಟಕಕ್ಕೆ ಮತ್ತೆ ಕಾಲಿಟ್ಟ ಮಹಾಮಾರಿ ಕೊರೊನಾ ಸೋಂಕು: ಸಾರ್ವಜನಿಕರು ಪಾಲಿಸಬೇಕಾದ Coronavirus ಮಾರ್ಗಸೂಚಿ..

vaccine corona
Published on

ಬೆಂಗಳೂರು: (Coronavirus)  ಕೊರೊನಾ ಹೊಸ ಇನ್ನಿಂಗ್ಸ್ ಶುರು ಮಾಡ್ಕೊಂಡು ಸಿಂಗಾಪುರ, ಹಾಂಕಾಂಗ್‌ನಲ್ಲಿ ಆರ್ಭಟಿಸಿದ ಬಳಿಕ ಭಾರತಕ್ಕೂ ಎಂಟ್ರಿಯಾಗಿ ಪಕ್ಕದ ಕೇರಳದಲ್ಲಿ ತಾಂಡವ ಆಡ್ತಿತ್ತು. ಇದೀಗ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಪಾಸಿಟಿವ್​ ಪ್ರಕರಣಗಳು  ಬಂದಿವೆ. ಈ ವಿಚಾರವಾಗಿ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

2025 ರಲ್ಲಿ, ಕರ್ನಾಟಕದಲ್ಲಿ ಇಲ್ಲಿಯವರೆಗೆ ಒಟ್ಟು 35 ಕೋವಿಡ್ 19 ಸಕ್ರಿಯ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 32 ಪ್ರಕರಣಗಳು ಬೆಂಗಳೂರು ನಗರದಿಂದ ಬಂದಿವೆ. ಆದಾಗ್ಯೂ, ಕೋವಿಡ್‌ನಿಂದ ಯಾವುದೇ ಸಾವು ವರದಿಯಾಗಿಲ್ಲ. ಪರಿಸ್ಥಿತಿ ಚೆನ್ನಾಗಿ ನಿಯಂತ್ರಣದಲ್ಲಿದ್ದರೂ, 20 ದಿನಗಳಿಂದ ಕೋವಿಡ್ 19 ಪ್ರಕರಣಗಳಲ್ಲಿ ಕ್ರಮೇಣ ಹೆಚ್ಚಳ ಕಂಡುಬಂದಿದೆ. ಆದ್ದರಿಂದ, ಸಾರ್ವಜನಿಕರು ಕೋವಿಡ್ 19 ಕುರಿತಾಗಿ ಸೂಕ್ತ ಕ್ರಮಗಳನ್ನು ಪಾಲಿಸ ಬೇಕಾಗಿದೆ.

Coronavirus
ನೀವು ಮತ್ತು ನಿಮ್ಮ ಕುಟುಂಬ ಹೇಗೆ ಕಾಳಜಿ ವಹಿಸಬೇಕು?

ಜನದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುವಾಗ ಗರ್ಭಿಣಿಯರು, ಮಕ್ಕಳು, ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.

ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಮುಂತಾದ ಕ್ರಮಗಳನ್ನು ಸಹ ಅನುಸರಿಸ ಬೇಕು.

ಉಸಿರಾಟದ ಸಮಸ್ಯೆ (SARI) ಲಕ್ಷಣಗಳನ್ನು ಹೊಂದಿರುವವರು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ, ಸಕಾಲಿಕ ಚಿಕಿತ್ಸೆಗಾಗಿ ಮತ್ತು ಕೋವಿಡ್ -19 ಮತ್ತಷ್ಟು ಹರಡುವಿಕೆಯನ್ನು ಪರಿಶೀಲಿಸಲು ಆದ್ಯತೆಯ ಮೇಲೆ ಕೋವಿಡ್ ಪರೀಕ್ಷೆಗೆ ಒಳಗಾಗುವುದನ್ನು ಪರಿಗಣಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net