ಕರೊನಾ ಲಾಕ್​ಡೌನ್​: ಜನರ ನೆರವಿಗೆ ಇಂಡಿಯನ್ ಬ್ಯಾಂಕ್​ನಿಂದ ಮೊಬೈಲ್ ಎಟಿಎಂ ಸೇವೆ

indian bank 30 MAR 20
Published on

ಬೆಂಗಳೂರು: ದೇಶಾದ್ಯಂತ ಕರೊನಾ ಸೋಂಕು ಹರಡದಂತೆ ತಡೆಯಲು ಏಪ್ರಿಲ್ 14ರ ತನಕ ಲಾಕ್​ಡೌನ್ ಜಾರಿಯಲ್ಲಿದ್ದು, ಒಟ್ಟಾರೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ನಿತ್ಯಜೀವನವನ್ನು ಸುವ್ಯವಸ್ಥಿತಗೊಳಿಸುವ ಎಲ್ಲ ಪ್ರಯತ್ನಗಳೂ ನಡೆದಿದ್ದು, ಆಯಾ ಕ್ಷೇತ್ರಗಳವರು ಈ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೆಲಸ ಮಾಡುತ್ತಿದ್ದಾರೆ.

ಅಂತೆಯೇ, ಕರೊನಾ ಮಾಹಾಮಾರಿ ಪರಿಣಾಮದಿಂದಾಗಿ ಗ್ರಾಹಕರ ದೈನಂದಿನ ಹಣಕಾಸಿನ ವ್ಯವಹಾರಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಇಂಡಿಯನ್ ಬ್ಯಾಂಕ್ ಮೊಬೈಲ್ ಎಟಿಎಂ ಸೇವೆ ಆರಂಭಿಸಿದೆ. ಚೆನ್ನೈನ ರಾಜಾಜಿ ರಸ್ತೆಯ ಇಂಡಿಯನ್ ಬ್ಯಾಂಕ್ ಶಾಖೆ ಕಚೇರಿ ಆವರಣದಲ್ಲಿ ಶನಿವಾರ ಕ್ಷೇತ್ರ ಪ್ರಧಾನ ವ್ಯವಸ್ಥಾಪಕ ಕೆ. ಚಂದ್ರ ರೆಡ್ಡಿ ಮೊಬೈಲ್ ಎಟಿಎಂ ವಾಹನಕ್ಕೆ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ಪ್ರತಿನಿತ್ಯ ಈ ವಾಹನವು ವಿವಿಧ ಪ್ರದೇಶಗಳಲ್ಲಿ ಸುತ್ತಾಡಲಿದೆ. ಹಣಕಾಸಿನ ಅವಶ್ಯಕತೆ ಇರುವವರು ಹಾಗೂ ಬೇರೆ ಬ್ಯಾಂಕಿನ ಗ್ರಾಹಕರು ಈ ಸೇವೆ ಪಡೆದುಕೊಳ್ಳಬಹುದು ಎಂದರು.

ಚೆನ್ನೈನ ರಾಜಾಜಿ ರಸ್ತೆಯ ಇಂಡಿಯನ್ ಬ್ಯಾಂಕ್ ಶಾಖೆ ಕಚೇರಿಯಲ್ಲಿ ಕ್ಷೇತ್ರ ಪ್ರಧಾನ ವ್ಯವಸ್ಥಾಪಕ ಕೆ. ಚಂದ್ರ ರೆಡ್ಡಿ ಮೊಬೈಲ್ ಎಟಿಎಂ ವಾಹನಕ್ಕೆ ಚಾಲನೆ ನೀಡಿದರು. ಚೆನ್ನೈ ಉತ್ತರ ವಲಯದ ವ್ಯವಸ್ಥಾಪಕ ಸಂಜಯ್ ಲಾಡೆ, ಚೆನ್ನೈ ದಕ್ಷಿಣ ವಲಯದ ವ್ಯವಸ್ಥಾಪಕ ಪಿ. ಸುಬ್ರಮಣಿಯನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net