ಸಂಸತ್​ನಲ್ಲಿ ಸುಳ್ಳು ಹೇಳಿದ ಸಂಸದನಿಗೆ ಭಾರೀ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ!; ಏನಿದು ಪ್ರಕರಣ? | Parliament

dk - 2025-02-18T145027.328
Published on

Parliament:ಸಿಂಗಾಪುರದ ಸಂಸತ್​​ನಲ್ಲಿ ವಿರೋಧ ಪಕ್ಷದ(ಎಲ್ಒಪಿ) ನಾಯಕ ಮತ್ತು ಭಾರತ ಮೂಲದ ಪ್ರೀತಮ್​ಸಿಂಗ್​ ಅವರಿಗೆ ಸುಳ್ಳು ಹೇಳಿದ್ದಕ್ಕಾಗಿ ಅಲ್ಲಿನ ಜಿಲ್ಲಾ ನ್ಯಾಯಾಲಯವು ಎರಡು ಆರೋಪಗಳಲ್ಲಿ ತಪ್ಪಿತಸ್ಥ ಎಂದು ಗುರುತಿಸಿ 14,000 ಸಾವಿರ ಸಿಂಗಾಪುರ ಡಾಲರ್​( 9 ಲಕ್ಷ ರೂ.) ದಂಡ ವಿಧಿಸಿದೆ ಎಂದು ಮಂಗಳವಾರ ವರದಿಯಾಗಿದೆ.

ಸಿಂಗ್​ ಅವರ ಎರಡು ಆರೋಪಕ್ಕೆ ತಲಾ 7,000 ಡಾಲರ್​(4.5 ಲಕ್ಷ ರೂ.) ಫೈನ್​ ಹಾಕಲಾಗಿದೆ. ಸಂಸದನ ಪ್ರಕರಣವನ್ನು ಗಮನಿಸುವುದಾದರೆ, ಭಾರತೀಯ ಮೂಲದ ಸಂಸದರಾದ ಪ್ರೀತಮ್ ಸಿಂಗ್ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಬಗ್ಗೆ ಸುಳ್ಳು ಕಥೆ ಕಟ್ಟಿದ್ದಾನೆ. ಅದಕ್ಕೆ ಅಲ್ಲಿನ ಕಾನೂನಿ ಪ್ರಕಾರ ಅವರಿಗೆ, ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಅಥವಾ ಕನಿಷ್ಠ 10,000 ಡಾಲರ್​ ದಂಡ ವಿಧಿಸಬೇಕು. ಆದ್ದರಿಂದ ಅವರಿಗೆ 14,000 ಸಿಂಗಾಪುರ್ ಡಾಲರ್ ಅಂದರೆ ಸುಮಾರು 9 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೆ ಆತ ಎರಡರಿಂದಲೂ ಪಾರಾಗಿದ್ದಾನೆ.

ಅಲ್ಲಿ ಸಂವಿಧಾನ ಪ್ರಕಾರ, ಹಾಲಿ ಸಂಸದರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಕನಿಷ್ಠ 10,000 ಡಾಲರ್​ ದಂಡ ವಿಧಿಸಿದರೆ. ಅಂತಹ ಸಂಸದರು ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಮುಂದಿನ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಆದರೆ, ಸಿಂಗ್​ ಈ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಗುರುತಿಸಿದರೂ ಶಿಕ್ಷೆ ಮತ್ತು ಅನರ್ಹ ಸ್ಥಾನದಿಂದ ಪಾರಾಗಿದ್ದಾನೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net