

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ರಾಜ್ಯ ನಂ.1 ದಿನಪತ್ರಿಕೆ ವಿಜಯವಾಣಿಯ ದಸರಾ ದೀಪಾವಳಿ ಪ್ರಯುಕ್ತ ನಡೆಯುವ ವಿಜಯವಾಣಿ ವಿಜಯೋತ್ಸವದ ಕೂಪನ್ ಬಿಡುಗಡೆ, ತಾಲೂಕಿನ ಪ್ರಖ್ಯಾತ ದಿನಸು ವ್ಯಾಪಾರ ಮಳಿಗೆ ಉಜಿರೆ ಸಂಧ್ಯಾ ಟ್ರೇಡರ್ಸ್‌ನಲ್ಲಿ ಶನಿವಾರ ನಡೆಯಿತು.
ಮಳಿಗೆ ಮಾಲೀಕರಾದ ರಾಧಾಕೃಷ್ಣ ಪೈ, ಜಯಲಕ್ಷ್ಮೀ ಆರ್.ಪೈ ಕೂಪನ್ ಬಿಡುಗಡೆಗೊಳಿಸಿ ಶುಭಹಾರೈಸಿದರು. ಬಳಿಕ ದೀಪಾವಳಿ ಪ್ರಯುಕ್ತ ಲಕ್ಷ್ಮೀ ಪೂಜೆ, ಸಿಬ್ಬಂದಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಮಾಲೀಕರ ಕುಟುಂಬಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ವಿಜಯೋತ್ಸವದಲ್ಲಿ ಹ್ಯಾಚ್ ಬ್ಯಾಕ್ ಕಾರು 7, ದ್ವಿಚಕ್ರವಾಹನ 10, 32 ಇಂಚಿನ ಎಲ್‌ಇಡಿ ಟಿವಿ 10, ರೆಫ್ರಿಜರೇಟರ್ 10, ವಾಶಿಂಗ್ ಮಷಿನ್ 10, 1 ಗ್ರಾಂ ಚಿನ್ನದ ನಾಣ್ಯ 140, ಸೇಫ್ ಲಾಕರ್ 10, ವೆಟ್ ಗ್ರೈಂಡರ್ 20, 20 ಗ್ರಾಂ ಬೆಳ್ಳಿ ನಾಣ್ಯ 223, ಮಿಕ್ಸರ್ 150, ಟ್ರಾಲಿ ಬ್ಯಾಗ್ 20, ಎಲೆಕ್ಟ್ರಿಕ್ ಕೆಟಲ್ 350, ಸ್ಮಾರ್ಟ್ ವಾಚ್ 30, ಇಂಡಕ್ಷನ್ ಸ್ಟವ್ 90, ಹಾಟ್ ಫ್ಲಾಸ್ಕ್ 300, ಪ್ರೆಶರ್ ಕುಕ್ಕರ್ 400, ಪೆಡೆಸ್ಟಲ್ ಫ್ಯಾನ್ 260, ಕಾಪರ್ ಬಾಟಲ್ 470 ಸೇರಿ 2500ಕ್ಕೂ ಅಧಿಕ ಬಹುಮಾನಗಳು ಗ್ರಾಹಕರಿಗೆ ನೀಡಲಾಗುತ್ತಿದೆ.
ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಉತ್ಪನ್ನ
ಸಂಧ್ಯಾ ಟ್ರೇಡರ್ಸ್‌ನಲ್ಲಿ ಗುಣಮಟ್ಟದ ದಿನಸು ಉತ್ಪನ್ನಗಳು ಇದ್ದು ರಖಂ ಮತ್ತು ಚಿಲ್ಲರೆ ಖರೀದಿದಾರರಿಗೆ ಕಡಿಮೆ ದರದಲ್ಲಿ ಸಿಗುತ್ತಿದೆ. ತಾಲೂಕಿನಾದ್ಯಂತ ಸಹಸ್ರಾರು ಗ್ರಾಹಕರು ಈ ಮಳಿಗೆಯಲ್ಲಿ ಖರೀದಿಸುತ್ತಿದ್ದು ಅನೇಕ ಕಂಪನಿಯ ಉತ್ಪನ್ನಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ವಿಜಯವಾಣಿ ವಿಜಯೋತ್ಸವದ ಪ್ರಯುಕ್ತ 2000ಕ್ಕೂ ಅಧಿಕ ಖರೀದಿಗೆ ಕೂಪನ್ ಪಡೆದು ಕಾರ್, ಬೈಕ್, ರೆಫ್ರಿಜರೇಟರ್ ಸಹಿತ 2500 ಬಹುಮಾನಗಳಿವೆ.