ಎರಡು ವರ್ಷದ ಹಿಂದೆ ಯುವತಿಗೆ ಮದುವೆಯಾಗಿದ್ದರೂ ಸಾವಿನಲ್ಲಿ ಒಂದಾದ ಪ್ರೇಮಿಗಳು!

lovers
Published on

ಯಾದಗಿರಿ: ಈ ಪ್ರೇಮಿಗಳು ಶಿವರಾತ್ರಿ ಹಬ್ಬದಂದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದ್ದು ಮೃತರನ್ನು ಸುವರ್ಣ(20), ಈಶಪ್ಪ(22) ಎಂದು ಗುರುತಿಸಲಾಗಿದೆ.

ಇಬ್ಬರೂ ಶಹಾಪುರದ ಉರುಸಗುಂಡಗಿ ಗ್ರಾಮದವರಾಗಿದ್ದು ಐದಾರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. 2 ವರ್ಷದ ಹಿಂದೆ ಪ್ರೀಯತಮೆ ಮದುವೆಯಾಗಿದ್ದ ಸುವರ್ಣ, ಬೆಂಗಳೂರಿನಲ್ಲಿ ತನ್ನ ಗಂಡನ ಜೊತೆ ವಾಸವಿದ್ದಳು.

ನಿನ್ನೆ ಗಂಡನಿಗೆ ಹೇಳದೇ ಬೆಂಗಳೂರಿನಿಂದ ಹುರುಸಗುಂಡಗಿ ಗ್ರಾಮಕ್ಕೆ ಈಕೆ ಬಂದಿದ್ದಳು. ಇಡೀ ರಾತ್ರಿ ಒಂದೆಡೆ ಕಳೆದಿದ್ದ ಪ್ರೇಮಿಗಳು ಬೆಳಗಿನ ಜಾವ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ. ಸದ್ಯ ಭೀಮರಾಯನ ಗುಡಿ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net