ಚಿನ್ನ ಕದ್ದು ಪರಾರಿಯಾದ ದಂಪತಿ ಬಂಧನ

couple
Published on

ಗಂಗೊಳ್ಳಿ: ಚಿನ್ನ ಕದ್ದು ಪರಾರಿಯಾದ ದಂಪತಿಯನ್ನು ಕೆಲವೇ ಗಂಟೆಗಳಲ್ಲಿ ಗಂಗೊಳ್ಳಿ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಬೀಚ್ ಬಳಿಯ ಉದಯ ಪೂಜಾರಿ ಅವರ ಮನೆಯ ಮೇಜಿನ ಮೇಲೆ ಇಟ್ಟಿದ್ದ ಬ್ಯಾಗ್‌ನಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 16 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 16 ಗ್ರಾಂ ತೂಕದ ಬಳೆ ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರವನ್ನು ಮಂಗಳವಾರ ಬೆಳಗ್ಗೆ ಕಳ್ಳರು ಕಳವು ಮಾಡಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳವು ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿ ಗಂಗೊಳ್ಳಿ ಠಾಣೆ ಉಪನಿರೀಕ್ಷಕ ಹರೀಶ್ ಆರ್. ಹಾಗೂ ಸಿಬ್ಬಂದಿ ಶಾಂತಾರಾಮ, ರಾಜು, ನಾಗರಾಜ, ರಾಘವೇಂದ್ರ, ಸಂದೀಪ ಕುರಣಿ, ಮಾರುತಿ ನಾಯ್ಕ ಹಾಗೂ ದಿನೇಶ್ ಅವರು, ಪ್ರಕರಣದ ಆರೋಪಿಗಳಾದ ಗುಜ್ಜಾಡಿ ಗ್ರಾಮದ ವಿನಾಯಕ(41) ಮತ್ತು ಪ್ರಮೀಳಾ(30) ದಂಪತಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ 16 ಗ್ರಾಂ ತೂಕದ ಚಿನ್ನದ ನೆಕ್ಲೆಸ್ 16 ಗ್ರಾಂ ತೂಕದ ಬಳೆ, ಹಾಗೂ 3 ಗ್ರಾಂ ತೂಕದ 3 ಚಿನ್ನದ ಉಂಗುರ ಹಾಗೂ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net