More

    ಐಪಿಎಲ್​ ಆಯೋಜನೆಗೆ ಶ್ರೀಲಂಕಾದಿಂದಲೂ ಬಿಸಿಸಿಐಗೆ ಆಹ್ವಾನ

    ನವದೆಹಲಿ: ಕರೊನಾ ಅಬ್ಬರದಿಂದಾಗಿ ಐಪಿಎಲ್​ 14ನೇ ಆವೃತ್ತಿ ಭಾರತದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡ ಬಳಿಕ ಟೂರ್ನಿಯನ್ನು ಪೂರ್ಣಗೊಳಿಸಲು ವಿವಿಧ ಆಯ್ಕೆಗಳು ಎದುರಾಗುತ್ತಿವೆ. ಈಗಾಗಲೆ ಯುಎಇ, ಇಂಗ್ಲೆಂಡ್​ ಮತ್ತು ಆಸ್ಟ್ರೆಲಿಯಾದಲ್ಲೂ ಟೂರ್ನಿಯ ಉಳಿದ ಭಾಗವನ್ನು ಆಯೋಜಿಸುವ ಚಿಂತನೆಗಳು ನಡೆದಿವೆ. ಈ ನಡುವೆ ನೆರೆಯ ಶ್ರೀಲಂಕಾದಿಂದಲೂ ಐಪಿಎಲ್​ 14ನೇ ಆವೃತ್ತಿಯ ಉಳಿದ ಭಾಗದ ಆತಿಥ್ಯ ವಹಿಸಲು ಆಸಕ್ತಿ ವ್ಯಕ್ತವಾಗಿದೆ.

    ಐಪಿಎಲ್​ ಆತಿಥ್ಯಕ್ಕೆ ಶ್ರೀಲಂಕಾ ಮುಂದೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2020ರಲ್ಲೂ ಐಪಿಎಲ್​ ಟೂನಿರ್ ಭಾರತದಲ್ಲಿ ನಡೆಯದೆ ಮುಂದೂಡಿಕೆಯಾದಾಗಲೂ ಶ್ರೀಲಂಕಾದಿಂದ ಟೂನಿರ್ ಆಯೋಜನೆಗೆ ಆಹ್ವಾನ ಬಂದಿತ್ತು. ಈ ಸಲವೂ ಪಟ್ಟು ಬಿಡದ ಶ್ರೀಲಂಕಾ ಮತ್ತೊಮ್ಮೆ ಐಪಿಎಲ್​ ಟೂರ್ನಿ ಆಯೋಜನೆಯ ಆಹ್ವಾನ ನೀಡಿದೆ.

    ಇದನ್ನೂ ಓದಿ: ಕರೊನಾದಿಂದ ಸಂಕಷ್ಟದಲ್ಲಿರುವವರಿಗೆ ಕ್ರಿಕೆಟಿಗ ರಿಷಭ್​ ಪಂತ್​ ನೆರವು 

    ಒಂದು ವೇಳೆ ಈ ಬಿಸಿಸಿಐ ಆಹ್ವಾನವನ್ನು ಒಪ್ಪಿಕೊಂಡರೆ, ಐಪಿಎಲ್​ ಆಯೋಜನೆಯಿಂದ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಭಾರಿ ಲಾಭವಾಗಲಿದೆ. ಈಗಾಗಲೆ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಐಪಿಎಲ್​ ಆತಿಥ್ಯ ಬಹುದೊಡ್ಡ ವರದಾನವಾಗಿ ಪರಿಣಮಿಸಬಹುದು. ಶ್ರೀಲಂಕಾ ಕ್ರಿಕೆಟ್​ ಮಂಡಳಿಯ ಹಾಲಿ ಯೋಜನೆಯ ಪ್ರಕಾರ, ಖೆಟ್ಟರಾಮ (ಕೊಲಂಬೊ), ಪಲ್ಲೆಕಿಲೆ, ಸೂರಿಯವೆವಾ ಮತ್ತು ಡಂಬುಲಾದಲ್ಲಿ ಐಪಿಎಲ್​ ಪಂದ್ಯಗಳನ್ನು ಆಯೋಜಿಸಬಹುದಾಗಿದೆ. ಈ ನಾಲ್ಕೂ ತಾಣಗಳು ಹೊನಲುಬೆಳಕಿನ ವ್ಯವಸ್ಥೆಗಳನ್ನು ಹೊಂದಿವೆ. ಈ ಪೈಕಿ ಮೊದಲ 3 ತಾಣಗಳು ಈಗಾಗಲೆ ಐಸಿಸಿ ಟೂರ್ನಿಯ ಪಂದ್ಯಗಳನ್ನೂ ಯಶಸ್ವಿಯಾಗಿ ಆಯೋಜಿಸಿವೆ.

    ಕರೊನಾ ಹಾವಳಿಯ ನಡುವೆ ಸ್ಥಳಿಯ ಟಿ20 ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಅನುಭವವೂ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ಇದೆ. ಕಳೆದ ವರ್ಷ ಅಕ್ಟೋಬರ್​-ನವೆಂಬರ್​ನಲ್ಲಿ 5 ತಂಡಗಳ ಲಂಕಾ ಪ್ರೀಮಿಯರ್​ ಲೀಗ್​ ನಡೆದಿತ್ತು. ಐಪಿಎಲ್​ ಟೂರ್ನಿಗೆ ಮುಂದಿನ ಸೆಪ್ಟೆಂಬರ್​ನಲ್ಲಿ ಆತಿಥ್ಯ ವಹಿಸಲು ಲಂಕಾ ಕ್ರಿಕೆಟ್​ ಮಂಡಳಿ ಬಯಸಿದೆ.

    ಐಪಿಎಲ್​ ಆಯೋಜನೆಗೆ ಶ್ರೀಲಂಕಾವನ್ನು ಆತಿಥೇಯ ಸ್ಥಳವಾಗಿ ಬಿಸಿಸಿಐ ಪರಿಗಣಿಸುವುದಾದರೆ ಅಲ್ಲಿನ ಹಾಲಿ ಕರೊನಾ ಪರಿಸ್ಥಿತಿಯನ್ನೂ ಗಮನಿಸಬೇಕಾಗುತ್ತದೆ. ಯಾಕೆಂದರೆ ಸದ್ಯ ಶ್ರೀಲಂಕಾದಲ್ಲೂ ಕೋವಿಡ್​-19 ಪರಿಸ್ಥಿತಿ ಮತ್ತೊಮ್ಮೆ ಹದಗೆಡುತ್ತಿದೆ. ಕಳೆದ ಒಂದು ವಾರದಲ್ಲಿ ಶ್ರೀಲಂಕಾದಲ್ಲಿ ಪ್ರತಿದಿನ 2 ಸಾವಿರ ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ ಏಪ್ರಿಲ್​ನಲ್ಲಿ ಈ ಸಂಖ್ಯೆ ಪ್ರತಿದಿನಕ್ಕೆ 300ರಷ್ಟಿತ್ತು.

    ಪೃಥ್ವಿ ಷಾ ಟೀಮ್​ ಇಂಡಿಯಾಗೆ ಮರಳಬೇಕಾದರೆ ಈ ಷರತ್ತು ಪೂರೈಸಬೇಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts