ಮಕ್ಕಳ ಸಾವಿಗೆ ಕಾರಣವಾಗಿದ್ದ ನೋಯ್ಡಾದ ಕೆಮ್ಮಿನ ಸಿರಪ್ ಕಂಪನಿ ಲೈಸೆನ್ಸ್ ರದ್ದು…

Cough-syrup-coronavirus
Published on

ನವದೆಹಲಿ: ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯ ಮಂಗಳವಾರ, ತೀವ್ರವಾದ ಉಸಿರಾಟದ ಕಾಯಿಲೆಯಿಂದ ಬಳಲುತ್ತಿರುವ 18 ಮಕ್ಕಳು, ಭಾರತೀಯ ಸಂಸ್ಥೆ ಮೇರಿಯನ್ ಬಯೋಟೆಕ್ ತಯಾರಿಸಿದ ಡಾಕ್ -1 ಮ್ಯಾಕ್ಸ್ ಎಂಬ ಕೆಮ್ಮಿನ ಸಿರಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು. ಅದಕ್ಕೂ ಹಿಂದೆ ಗಾಂಬಿಯಾ ದೇಶದಲ್ಲಿ ಹರಿಯಾಣ ಮೂಲದ ಮೇಡನ್​ ಫಾರ್ಮಾ ತಯಾರಿಸಿದ್ದ ಸಿರಪ್​ನಿಂದಾಗಿ 63ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರು.

ಆ ಸಂದರ್ಭ ಪ್ರಾಥಮಿಕ ಪ್ರಯೋಗಾಲಯ ಅಧ್ಯಯನಗಳು ಡಾಕ್-1 ಮ್ಯಾಕ್ಸ್ ಸಿರಪ್‌ನ ಈ ಸರಣಿಯು ಎಥಿಲೀನ್ ಗ್ಲೈಕೋಲ್ ಅನ್ನು ಹೊಂದಿದೆ ಎಂದು ತೋರಿಸಿತ್ತು. ಈ ವಸ್ತುವು ವಿಷಕಾರಿಯಾಗಿದ್ದು ರೋಗಿಯ ಆರೋಗ್ಯದಲ್ಲಿ ಗಂಭೀರ ಬದಲಾವಣೆಗಳನ್ನು ಉಂಟುಮಾಡಬಹುದು. ಇದರಿಂದಾಗಿ ವಾಂತಿ, ಮೂರ್ಛೆ, ಸೆಳೆತ, ಉಂಟಾಗಿ ಕಡೆಗೆ ಪ್ರಾಣವೂ ಹೋಗಬಹುದು.

ಈ ಹಿನ್ನೆಲೆಯಲ್ಲಿ ಇದೀಗ ಭಾರತ ಸರ್ಕಾರ ಮರಿಯನ್ ಬಯೋಟೆಕ್ ಸಂಸ್ಥೆಯ ಲೈಸೆನ್ಸ್ ರದ್ದು ಮಾಡುವಂತೆ ಸೂಚನೆ ನೀಡಿದೆ.

ಉಜ್ಬೇಕಿಸ್ತಾನದ ಸುದ್ದಿ ಹೊರ ಬರುತ್ತಿದ್ದಂತೆಯೇ ಪರೀಕ್ಷೆಗಾಗಿ ತೆಗೆದುಕೊಂಡ 36 ಮಾದರಿಗಳಲ್ಲಿ 22ರಲ್ಲಿ ಎಥಿಲೀನ್ ಗ್ಲೈಕಾಲ್ ಕಲಬೆರಕೆಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮರಿಯನ್ ಬಯಪಟೆಕ್ನಿಕ್ ಸಂಸ್ಥೆಯ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲು ಕೇಂದ್ರವು ರಾಜ್ಯ ಔಷಧ ನಿಯಂತ್ರಕ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದೆ. ಈ ಬಗ್ಗೆ ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಡ್ರಗ್ ಇನ್ಸ್ಪೆಕ್ಟರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net