ಕಾಸ್ಟ್‌ ಕಟ್ಟಿಂಗ್‌ ನೆಪವೊಡ್ಡಿ ಇನ್ನೊಂದು ವಿದೇಶಿ ಕಚೇರಿ ಕ್ಲೋಸ್‌- ಉದ್ಯೋಗಿಗಳು ಅತಂತ್ರ!

uber
Published on

ಮುಂಬೈ: ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಿರುವ ಉಬರ್ ಟ್ಯಾಕ್ಸಿ ಸರ್ವೀಸ್ ಸಂಸ್ಥೆ, ಇದೀಗ ಮುಂಬೈನ ತನ್ನ ಬೃಹತ್‌ ಕಚೇರಿಯನ್ನೇ ಕ್ಲೋಸ್‌ ಮಾಡಿದೆ. ಕಾಸ್ಟ್‌ ಕಟ್ಟಿಂಗ್‌ ನೆಪವೊಡ್ಡಿ ಈ ಕಚೇರಿಯನ್ನು ಬಂದ್‌ ಮಾಡಲಾಗಿದೆ.

ಅಮೆರಿಕದ ಈ ಸಂಸ್ಥೆ ಇದಾಗಲೇ ತನ್ನ 45 ಕಚೇರಿಗಳನ್ನು ಬಂದ್‌ ಮಾಡಿದ್ದು, ಇದೀಗ ಮತ್ತೊಂದು ಸೇರ್ಪಡೆ.

ಅತಿ ದೊಡ್ಡ ಕಚೇರಿ ಎನಿಸಿಕೊಂಡಿದ್ದ ಮುಂಬೈ ಕಚೇರಿಯಲ್ಲಿನ ಉದ್ಯೋಗಿಗಳ ಸ್ಥಿತಿ ಸದ್ಯ ಡೋಲಾಯಮಾನವಾಗಿದೆ! ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಬರ್ ಸ್ಪಷ್ಟಪಡಿಸಿದೆ, ಆದರೆ ಉದ್ಯೋಗಿಗಳ ಸ್ಥಿತಿಯ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ.

ಹಿಂದೊಮ್ಮೆ ವಿಡಿಯೋ ಕಾಲ್ ಮಾಡುವ ಮೂಲಕ 3,700 ಉದ್ಯೋಗಿಗಳನ್ನು ತೆಗೆದುಹಾಕಿತ್ತು ಈ ಕಂಪನಿ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮುಂಬೈ ಕಚೇರಿಯಲ್ಲಿನ ಬಹುತೇಕರು ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೀಗ ಮುಂಬೈ ಕಚೇರಿ ಮುಚ್ಚಲಾಗಿರುವ ಕಾರಣ, ಹಲವರು ಉದ್ಯೋಗ ಕಳೆದುಕೊಳ್ಳಲಿದ್ದಾರೆ.

ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸುಮಾರು 6,700 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ನಿರ್ಧಾರಕ್ಕೆ ಬಂದ ಒಂದು ತಿಂಗಳ ನಂತರ ಉಬರ್‌ನ ಮುಂಬೈ ಕಚೇರಿ ಮುಚ್ಚುವಿಕೆಗೆ ಮುಂದಾಗಿದೆ. ಭಾರತದಲ್ಲಿ ಸುಮಾರು 600 ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net