

ಮಂಡ್ಯ: ಭಾರತದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದ್ದು ಕರ್ನಾಟಕದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಓರ್ವ ವೃದ್ಧ ಕರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾನೆ. ಹಲವು ಜಿಲ್ಲೆಗಳಲ್ಲಿ ಶಂಕಿತ ಕರೊನಾ ವೈರಸ್ ಸೋಂಕಿತರನ್ನು ಪ್ರತ್ಯೇಕ ವಾರ್ಡ್ಗಳಲ್ಲಿಟ್ಟು ತಪಾಸಣೆ ಮಾಡಲಾಗುತ್ತಿದೆ.
ಈಗ ಸಕ್ಕರೆ ನಾಡು ಮಂಡ್ಯಕ್ಕೂ ಕರೊನಾ ಭೀತಿ ಎದುರಾಗಿದೆ. 47 ವರ್ಷದ ಮಹಿಳೆಯೋರ್ವರಲ್ಲಿ ಶಂಕಿತ ಸೋಂಕು ಕಾಣಿಸಿಕೊಂಡಿದ್ದು ಅವರನ್ನು ಮಿಮ್ಸ್ಗೆ ದಾಖಲಿಸಲಾಗಿದೆ.
ಈ ಮಹಿಳೆ ನಾಗಮಂಗಲದವರಾಗಿದ್ದು ಹಜ್ ಯಾತ್ರೆಗೆ ತೆರಳಿದ್ದರು. ಅಲ್ಲದೆ, ಕಲಬುರಗಿಯಲ್ಲಿ ಕರೊನಾ ಸೋಂಕು ತಗುಲಿ ಮೃತಪಟ್ಟ ವೃದ್ಧ ಪ್ರಯಾಣ ಮಾಡಿದ್ದ ವಿಮಾನದಲ್ಲೇ ಇವರೂ ಪ್ರಯಾಣಿಸಿದ್ದರು. ಹಜ್ ಯಾತ್ರೆಯಿಂದ ಮಾ.1ರಂದು ವಾಪಸ್ ಬಂದ ನಂತರ ಅವರಲ್ಲಿ ಸಾಮಾನ್ಯ ಜ್ವರ, ಶೀತ ಕಾಣಿಸಿಕೊಂಡಿತ್ತು. ದಿನ ಕಳೆದಂತೆ ಕಾಯಿಲೆ ಗಂಭೀರವಾಗುತ್ತ ಹೋದ ಪರಿಣಾಮ ಮಿಮ್ಸ್ಗೆ ದಾಖಲು ಮಾಡಲಾಗಿದೆ. ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.