ರಾಜ್ಯದಲ್ಲಿ ಒಂದೇ ದಿನ 19 ವೈರಸ್‌ ಪೀಡಿತರು- ಇಬ್ಬರ ಸಾವು: 279ಕ್ಕೇರಿದ ಸೋಂಕಿತರ ಸಂಖ್ಯೆ 80 ಮಂದಿ ಬಿಡುಗಡೆ

Nurses Corona
Published on

ಬೆಂಗಳೂರು: ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 19 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಂದೇ ದಿನ ಈ ಮಹಾಮಾರಿ ಎರಡು ಜೀವಗಳನ್ನು ಬಲಿ ಪಡೆದಿದೆ.

ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 279ಕ್ಕೆ ಏರಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ ಒಬ್ಬ ಗರ್ಭಿಣಿಯೂ ಸೇರಿದ್ದಾರೆ. 80 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ.

ಮೃತಪಟ್ಟವರ ಪೈಕಿ ಕಲಬುರಗಿ ಮೂವರು, ಚಿಕ್ಕಬಳ್ಳಾಪುರ ಇಬ್ಬರು, ಬೆಂಗಳೂರು ಇಬ್ಬರು, ಬಾಗಲಕೋಟೆ, ಬೆಳಗಾವಿ, ವಿಜಯಪುರ, ತುಮಕೂರು ಹಾಗೂ ಗದಗ ತಲಾ ಒಬ್ಬರು ಸೇರಿದ್ದಾರೆ.

ಸೋಂಕಿತರ ಪ್ರಮಾಣ ಹೀಗಿದೆ:

  • ಬೀದರ್‌ನಲ್ಲಿ 13 ಮಂದಿ, ಬೆಂಗಳೂರು ಗ್ರಾಮಾಂತರದಲ್ಲಿ 12 ಮಂದಿ, ಮಂಡ್ಯದಲ್ಲಿ 8, ಬಳ್ಳಾರಿಯಲ್ಲಿ 6 ಮಂದಿ ಸೋಂಕು ಪೀಡಿತರಾಗಿದ್ದು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಬೆಂಗಳೂರಿನಲ್ಲಿ 71 ಮಂದಿಗೆ ಸೋಂಕು ತಗುಲಿದ್ದು, 35 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ.
  • ಮೈಸೂರಿನಲ್ಲಿ 58 ಮಂದಿ ಸೋಂಕಿತರಾಗಿದ್ದು 12 ಮಂದಿ ಬಿಡುಗಡೆಯಾಗಿದ್ದಾರೆ.
  • ಬೆಳಗಾವಿಯಲ್ಲಿ 19 ಮಂದಿ ಸೋಂಕಿತರಾಗಿದ್ದು ಒಬ್ಬರು ಬಿಡುಗಡೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
  • ಕಲಬುರಗಿಯಲ್ಲಿ 17 ಮಂದಿ ಸೋಂಕಿತರಾಗಿದ್ದು ಇಬ್ಬರು ಬಿಡುಗಡೆ ಹೊಂದಿದ್ದು ಮೂರು ಮಂದಿ ಮೃತಪಟ್ಟಿದ್ದಾರೆ.
  • ಬಾಗಲಕೋಟೆಯಲ್ಲಿ 14 ಸೋಂಕು ಪ್ರಕರಣವಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
  • ಚಿಕ್ಕಬಳ್ಳಾಪುರದಲ್ಲಿ 13 ಮಂದಿ ಸೋಂಕು ಪೀಡಿತರಾಗಿದ್ದು ಮೂರು ಮಂದಿ ಬಿಡುಗಡೆಯಾಗಿದ್ದರೆ ಇಬ್ಬರು ಮೃತಪಟ್ಟಿದ್ದಾರೆ.
  • ಉತ್ತರ ಕನ್ನಡದಲ್ಲಿ 11 ಮಂದಿಗೆ ಸೋಂಕು ತಗುಲಿದ್ದು 8 ಮಂದಿ ಬಿಡುಗಡೆಯಾಗಿದ್ದಾರೆ.
  • ವಿಜಯಪುರದಲ್ಲಿ 10 ಮಂದಿ ಸೋಂಕುಪೀಡಿತರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
  • ಧಾರವಾಡದಲ್ಲಿ ಆರು ಮಂದಿಗೆ ಸೋಂಕು ತಗುಲಿದ್ದು ಒಬ್ಬರು ಬಿಡುಗಡೆಯಾಗಿದ್ದಾರೆ.
  • ಉಡುಪಿಯಲ್ಲಿ ಮೂವರಿಗೆ ಸೋಂಕು ತಗುಲಿದ್ದು ಇಬ್ಬರು ಬಿಡುಗಡೆಯಾಗಿದ್ದಾರೆ.
  • ದಾವಣಗೆರೆಯಲ್ಲಿ ಇಬ್ಬರು ಹಾಗೂ ಚಿತ್ರದುರ್ಗದಲ್ಲಿ ಒಬ್ಬರಿಗೆ ಸೋಂಕು ತಗುಲಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ.
  • ತುಮಕೂರಿನಲ್ಲಿ ಇಬ್ಬರಿಗೆ ಸೋಂಕು ತಗುಲಿದ್ದು ಒಬ್ಬರು ಮೃತಪಟ್ಟಿದ್ದಾರೆ.
  • ಗದಗದಲ್ಲಿ ಸೋಂಕು ಪೀಡಿತರಾಗಿದ್ದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಸದ್ಯ ಯಾರಿಗೂ ಸೋಂಕು ಪತ್ತೆಯಾಗಿಲ್ಲ.

ಕರೊನಾ ಸೋಂಕು ತಡೆಗಟ್ಟಲು ಮಸೀದಿಯಲ್ಲಿ ಯಾವುದೇ ಸಭೆ, ಪ್ರಾರ್ಥನೆ ನಡೆಸದಂತೆ ಹಾಗೂ ಮೃತ ವ್ಯಕ್ತಿಗಳನ್ನು ದಫನ್‌ ಮಾಡಲು ಅನುಮತಿ ನೀಡದಂತೆ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯು ರಾಜ್ಯದ ಎಲ್ಲ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿರುತ್ತದೆ.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net