ವೈರಸ್​ ತಳಿಗಳ ಪ್ರತ್ಯೇಕತೆ ಔಷಧಿ, ರೋಗ ಪತ್ತೆ ಹಚ್ಚುವ ಕಿಟ್​ಗಳ ಉತ್ಪಾದನೆಗೆ ಮೊದಲ ಹೆಜ್ಜೆ

Corona
Published on

ಒಂದು ಭೌಗೋಳಿಕ ಪ್ರದೇಶದಲ್ಲಿ ವ್ಯತ್ಯಾಸಗಳು ಅಥವಾ ಸಂಭವನೀಯ ರೂಪಾಂತರಗಳನ್ನು ಪರೀಕ್ಷಿಸಲು ವಿಜ್ಞಾನಿಗಳು ರೋಗಿಗಳಿಂದ ವೈರಸ್​ಗಳ ತಳಿಗಳನ್ನು ಪ್ರತ್ಯೇಕಿಸಿದ್ದಾರೆ.

ವೈರಸ್​ ತಳಿಗಳ ಪ್ರತ್ಯೇಕತೆಯು ದೇಶದಲ್ಲಿ ಔಷಧಿಗಳು, ಲಸಿಕೆಗಳು ಹಾಗೂ ರೋಗ ಪತ್ತೆ ಹಚ್ಚುವ ಕಿಟ್​ಗಳನ್ನು ಉತ್ಪಾದಿಸಲು ಮೊದಲ ಹೆಜ್ಜೆಯಾಗಿದೆ.

ಭಾರತದಲ್ಲಿ ಕೋವಿಡ್-19ಗೆ ಕಾರಣವಾಗುವ ಕರೊನಾ ವೈರಸ್​ನ ಮೂರು ತಳಿಗಳಲ್ಲಿ ಯಾವುದೇ ರೂಪಾಂತರಗಳಿಲ್ಲ ಎಂದು ವಿಜ್ಞಾನಿಗಳ ಬಳಿ ಲಭ್ಯವಿರುವ ದಾಖಲೆಗಳು ಸೂಚಿಸುತ್ತವೆ ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಆರಂಭಿಕ ಮಾದರಿಗಳು ಚೀನಾದ ವುಹಾನ್​ನಲ್ಲಿ ಕಂಡುಬರುವಂತಹ ವೈರಸ್​ ಅನುಕ್ರಮವನ್ನು ಹೊಂದಿದ್ದವು. ಎರಡನೆಯ ಅನುಕ್ರಮವು ಇರಾನ್​ನಲ್ಲಿ ಪ್ರಸರಣವಾಗುತ್ತಿದ್ದುದ್ದಾಗಿತ್ತು ಮತ್ತು ಅದು ವುಹಾನ್​ ವೈರಸ್​ ಹೋಲುವಂತಿತ್ತು. ಅಮೆರಿಕ ಹಾಗೂ ಯುಕೆಯಲ್ಲಿನ ಸೋಂಕಿತರಲ್ಲಿ ಕಂಡುಬಂದ ವೈರಸ್​ ಮೂರನೇ ತಳಿಯಾಗಿದೆ ಎಂದು ಐಸಿಎಂಆರ್​ನ ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ರಾಮನ್​ ಆರ್​ ಗಂಗಖೇಡ್ಕರ್​ ತಿಳಿಸಿದ್ದಾರೆ.

ಈ ತಳಿಗಳು ರೂಪಾಂತರಗೊಳ್ಳಲಾರವು. ಈ ತಳಿಗಳ ಪೈಕಿ ಯಾವ ತಳಿಗಳು ಸ್ವದೇಶಿ ತಳಿಯಾಗಿವೆ ಎಂಬುದು ಈಗಿರುವ ಪ್ರಶ್ನೆಯಾಗಿದ್ದು, ಈ ಸಂದರ್ಭದಲ್ಲಿ ಅದನ್ನು ಊಹಿಸುವುದು ಕಷ್ಟ ಎಂದು ತಿಳಿಸಿದ್ದಾರೆ.‘

ಔಷಧಿ, ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದಲ್ಲಿ ಹಲವು ಸಂಶೋಧನಾ ಯೋಜನೆಗಳು ನಡೆಯುತ್ತಿವೆ. ಐಸಿಎಂಆರ್​ ಶ್ರೀಘ್ರವೇ ಭಾರತದ ಜನರಲ್ಲಿ ಬಿಸಿಜಿ ಲಸಿಕೆಯ ಪರಿಣಾಮದ ಅಧ್ಯಯನವನ್ನು ಆರಂಭಿಸಲಿದೆ. ಬಿಸಿಜಿ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ನಂಬಲಾಗಿದ್ದು, ಇದು ಕ್ಷಯ ರೋಗದ ಲಸಿಕೆಯಾಗಿದೆ. ಕೋವಿಡ್​-19 ವಿರುದ್ಧ ಹೋರಾಡುವಲ್ಲಿ ಇದು ಭರವಸೆ ಮೂಡಿಸಿದೆ ಎಂದು ಅಮೆರಿಕ ಸಂಶೋಧಕರು ಕಂಡುಕೊಂಡಿದ್ದಾರೆ.

ಆರೋಗ್ಯ ಸಚಿವಾಲಯದ ಪ್ರಕಾರ ಏಪ್ರಿಲ್​ 17ರವರೆಗೆ ಭಾರತದಲ್ಲಿ 13,387 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 1749 ರೋಗಿಗಳು ಚೇತರಿಸಿಕೊಂಡಿದ್ದರೆ, 452 ಸಾವಿನ ಪ್ರಕರಣ ದಾಖಲಾಗಿವೆ.

ಲಾಕ್​ಡೌನ್​ ಕ್ರಮಗಳ ಅನುಷ್ಠಾನವನ್ನು ಹೇಗೆ ಸುಧಾರಿಸಬಹುದು (ಕೋವಿಡ್ 19 ಕ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ) ಹಾಗೂ ಕೋವಿಡ್​ 19 ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ರೋಗ ಪತ್ತೆ, ಲಸಿಕೆ ಅಭಿವೃದ್ಧಿ ಹಾಗೂ ಔಷಧಿ ಮತ್ತು ಆಸ್ಪತ್ರೆ ಸೌಲಭ್ಯಗಳನ್ನು ಹೇಗೆ ಬಲಪಡಿಸಬಹುದು ಎಂಬುದನ್ನು ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ನೇತೃತ್ವದಲ್ಲಿ ಸಚಿವರ ತಂಡ ಚಚಿರ್ಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net