2014ರ ಮೊದಲು ಕರೊನಾ ಕಾಡಿದ್ದಿದ್ದರೆ ಏನಾಗಬಹುದಿತ್ತು?

Corona
Published on

ನವದೆಹಲಿ: ಕರೊನಾ ಮಹಾಮಾರಿ ಇಡೀ ಜಗತ್ತಿನ ಜನರನ್ನು ಆತಂಕದ ಮಡುವಿಗೆ ತಳ್ಳಿದೆ. ಭಾರತ ಸೇರಿ ಹಲವು ದೇಶಗಳು ಲಾಕ್​ಡೌನ್ ಘೊಷಿಸಿ ಜನರ ಓಡಾಟದ ಮೇಲೆ ನಿಯಂತ್ರಣ ವಿಧಿಸಿ, ವೈರಾಣು ಹರಡುವುದನ್ನು ತಡೆಯಲು ಹರಸಾಹಸ ಪಡುತ್ತಿವೆ. ಲಸಿಕೆ ಸಂಶೋಧನೆಗೆ ವ್ಯಾಪಕ ಕೆಲಸ ನಡೆಯುತ್ತಿದೆ. ಮೊದಲ ಹಂತದ ಲಾಕ್​ಡೌನ್ ವಿಸ್ತರಣೆಗೊಂಡು ಮೇ 3ರ ವರೆಗೆ ಜಾರಿಯಲ್ಲಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮನೆಯಲ್ಲೇ ಉಳಿಯುವುದು ಈ ಲಾಕ್​ಡೌನ್​ನ ಪ್ರಮುಖ ಅಂಶಗಳಾಗಿವೆ. ಒಂದು ವೇಳೆ ಈ ಮಹಾಮಾರಿ 2014ರಲ್ಲಿ ವಕ್ಕರಿಸಿದ್ದಿದ್ದರೆ ಭಾರತದಲ್ಲಿ ಪರಿಸ್ಥಿತಿ ಏನಾಗಬಹುದಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳುವುದೇ ದುಸ್ತರ. 2014ರ ಬಳಿಕ ಎನ್​ಡಿಎ ಸರ್ಕಾರ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದು, ಮೂಲಸೌಲಭ್ಯ, ವಸತಿ, ಉದ್ಯೋಗ ಇನ್ನಿತರ ಕ್ಷೇತ್ರಗಳಲ್ಲಿ ವ್ಯಾಪಕ ಸುಧಾರಣೆ ತಂದಿದೆ. ಜನಜೀವನ ತುಸು ಸರಳವಾಗಿದೆ. ಒಂದು ವೇಳೆ ಈ ಅಂಶಗಳು ಇಲ್ಲದಿದ್ದರೆ, ಕರೊನಾ ವಿರುದ್ಧ ಭಾರತ ಸಮರ ಕೈಗೊಳ್ಳುವುದು ದುಸ್ತರವಾಗುತ್ತಿತ್ತು.

  1. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ನಂತರ 10 ಕೋಟಿ ಕುಟುಂಬಗಳಿಗೆ ಮನೆಯಲ್ಲಿ ಶೌಚಗೃಹ ನಿರ್ವಿುಸಲಾಗಿದೆ. ಒಂದು ವೇಳೆ ಇದು ಇಲ್ಲದಿದ್ದರೆ, ಲಾಕ್​ಡೌನ್ ವೇಳೆ ಮನೆಯಿಂದ ಜನರು ಹೊರ ಬರುವುದು ಅನಿವಾರ್ಯವಾಗುತ್ತಿತ್ತು. ಶುಚಿತ್ವ ಕಾಯ್ದುಕೊಳ್ಳುವುದು ಸಾಧ್ಯವಾಗುತ್ತಿರಲಿಲ್ಲ.

2. ಈ ಮೊದಲು ಅಡುಗೆಗೆ ಒಲೆ ಹೊತ್ತಿಸಲು ಎಂಟು ಕೋಟಿಗೂ ಹೆಚ್ಚು ಮಹಿಳೆಯರು ಉರುವಲು ಕಟ್ಟಿಗೆ ತರಬೇಕಾಗಿತ್ತು. ಈಗ ಮಹಿಳೆಯರು ಸುಲಭವಾಗಿ ಗ್ಯಾಸ್ ಸ್ಟವ್​ನಲ್ಲಿ ಅಡುಗೆ ಮಾಡಬಹುದು. ಬಡವರಿಗೆ ಉಜ್ವಲಾ ಯೋಜನೆಯಲ್ಲಿ ಸಿಲಿಂಡರ್, ಸ್ಟವ್​ಗಳನ್ನು ನೀಡಲಾಗಿದೆ.

3. ಪ್ರಸ್ತುತ ಎನ್​ಡಿಎ ಸರ್ಕಾರ 2 ಕೋಟಿ ಕುಟುಂಬಗಳಿಗೆ ಸ್ವಂತ ಸೂರು ಹೊಂದಲು ನೆರವಾಗಿದೆ. ಇದರಿಂದ ಅವರು ನೆಮ್ಮದಿಯಾಗಿ ಮನೆಯಲ್ಲಿ ಇರಬಹುದು.

4. ಲಾಕ್​ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೇರ ನಗದು ಯೋಜನೆ ಘೋಷಣೆ ಮಾಡಿದೆ. ಈ ಹಿಂದೆಯೇ ಜನಧನ ಯೋಜನೆ ಮೂಲಕ ಸರ್ಕಾರ 36 ಕೋಟಿ ಬಡವರಿಗೆ ಬ್ಯಾಂಕ್ ಖಾತೆ ಇದಗಿಸಿದೆ. ಇದು ಇಲ್ಲದಿದ್ದರೆ ಬಡ ಜನರಿಗೆ ನೇರವಾಗಿ ಪರಿಹಾರ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.

5. 18,000ಕ್ಕೂ ಹೆಚ್ಚು ಹಳ್ಳಿ, 3 ಕೋಟಿಗಿಂತ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಇಲ್ಲದೇ 21 ದಿನ ಲಾಕ್​ಡೌನ್ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.

6. 2014ರಿಂದ ಮೋದಿ ಸರ್ಕಾರ ಬಡ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಕೆಲಸ ಮಾಡದಿದ್ದರೆ ಎಂಥ ಭಯಾನಕ ಸ್ಥಿತಿ ಸೃಷ್ಟಿಯಾಗಬಹುದಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು.

2014ರ ನಂತರದ ಪ್ರಮುಖ ಅಭಿವೃದ್ಧಿ

  • 10 ಕೋಟಿ ಮನೆಗಳಲ್ಲಿ ಶೌಚಗೃಹ.
  • 8 ಕೋಟಿ ಅಡುಗೆ ಅನಿಲ ಒಲೆಗಳ ವಿತರಣೆ
  • 2 ಕೋಟಿ ಜನರಿಗೆ ಸ್ವಂತ ಸೂರು.
  • 18000 ಗ್ರಾಮ, 3 ಕೋಟಿ ಮನೆಗಳ ವಿದ್ಯುದೀಕರಣ.
  • 36 ಕೋಟಿ ಜನರಿಗೆ ಬ್ಯಾಂಕ್ ಖಾತೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net