ಸೋಂಕಿತರ ಕಿರಿಕ್: ಕರೊನಾ ಸೇನಾನಿಗಳ ಜತೆ ಅನುಚಿತ ವರ್ತನೆ

coorona virus 4 mar 20
Published on

ಬೆಂಗಳೂರು/ನವದೆಹಲಿ: ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜತೆ ಶಂಕಿತ ಸೋಂಕಿತರ ಅನುಚಿತ ವರ್ತನೆ ಮುಂದುವರಿದಿದ್ದು, ಶನಿವಾರ ಬೀದರ್, ಉತ್ತರಪ್ರದೇಶದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ಬೀದರ್​ನ ಬ್ರಿಮ್್ಸ ಆಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿರುವ 10 ಕರೊನಾ ಸೋಂಕಿತರು ವೈದ್ಯಕೀಯ ಸಿಬ್ಬಂದಿಗೆ ಕೊಂಚ ಕೂಡ ಸಹಕಾರ ನೀಡುತ್ತಿಲ್ಲ. ಊಟ ಸರಿಯಾಗಿಲ್ಲ, ಕೋಣೆ ಹೈಫೈ ಇಲ್ಲ, ಶೌಚಗೃಹ ಚೆನ್ನಾಗಿಲ್ಲ, ಮನೆಯಿಂದ ಊಟ ತರಿಸಿಕೊಳ್ಳುತ್ತೇವೆ ಎಂಬಿತ್ಯಾದಿ ರಗಳೆ ತೆಗೆಯುವ ಇವರು ತಪಾಸಣೆ ನಡೆಸುವು ದಕ್ಕೂ ವೈದ್ಯರಿಗೆ ಅವಕಾಶ ನೀಡುತ್ತಿಲ್ಲ. ವೈದ್ಯರು ತಪಾಸಣೆ ಮಾಡುವುದಾಗಿ ಹೇಳಿದರೆ ‘ನಿಮ್ಮ ಮೇಲೆ ಉಗುಳುತ್ತೇವೆ, ಮುಟ್ಟುತ್ತೇವೆ’ ಎಂದು ಹೆದರಿಸು ತ್ತಿದ್ದಾರೆ. ಇನ್ನೂ ಕೆಲವರು ವೈದ್ಯರ ವಿರುದ್ಧವೇ ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ ಹರಿಬಿಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಉಗುಳಿದಾತ ವಶಕ್ಕೆ: ಕರೊನಾ ಸೋಂಕಿನ ಭೀತಿ ಮಧ್ಯೆಯೇ ಜನರ ಮೇಲೆ ಉಗುಳುವ ಮೂಲಕ ಸೋಂಕು ಹರಡಲು ಯತ್ನಿಸಿದ ಹುಬ್ಬಳ್ಳಿಯ ಆಜಾದ ಪಾರ್ಕ್ ನಿವಾಸಿ ಇನಾಯತ್​ಉಲ್ಲಾ ಖಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗಾಗಿ ಕಿಮ್ಸ್​ಗೆ ಕಳಿಸಲಾಗಿದೆ.

ಉ.ಪ್ರ. ಆಸ್ಪತ್ರೆಯಲ್ಲಿ ಉಗುಳುವ ಬೆದರಿಕೆ

ಉತ್ತರಪ್ರದೇಶದ ಕಾನ್ಪುರದಲ್ಲಿ ಕ್ವಾರಂಟೈನ್​ಗೆ ಒಳಗಾಗಿರುವ ತಬ್ಲಿಘಿ ಜಮಾತ್​ನ ಸದಸ್ಯರು ಚಿಕಿತ್ಸೆ ಪಡೆಯಲು ನಿರಾಕರಿಸಿ ಮಹಿಳಾ ವೈದ್ಯಕೀಯ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ಹಿನ್ನೆಲೆ ಆಸ್ಪತ್ರೆ ಆಡಳಿತ ಮಂಡಳಿ ಅವರ ಚಿಕಿತ್ಸೆಗೆ ನೇಮಕವಾಗಿದ್ದ ಎಲ್ಲ ಮಹಿಳಾ ಸಿಬ್ಬಂದಿಯನ್ನು ಬೇರೆಡೆಗೆ ಸ್ಥಳಾಂತರಿಸಿದೆ. ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ದಾಖಲಾಗಿರುವ ತಬ್ಲಿಘಿ ಜಮಾತ್​ನ 22 ಸದಸ್ಯರಲ್ಲಿ ಈಗಾಗಲೇ 6 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದರೆ ತಬ್ಲಿಘಿ ಸದಸ್ಯರು ಬೇಕಂತಲೇ ಕೈ ಮೇಲೆ ಉಗುಳಿಕೊಂಡು ಅದನ್ನು ಮೆಟ್ಟಿಲು ಹತ್ತುವ ಬಳಿ ಇರುವ ಕಂಬಿಗಳಿಗೆ ಸವರುತ್ತಿದ್ದಾರೆ. ಅಲ್ಲದೇ ನೀಡಲಾಗಿರುವ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಸ್ಸಾಂನಲ್ಲೂ ಇದೇ ಪರಿಸ್ಥಿತಿ ಇದೆ. ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವ ಶಂಕಿತ ಸೋಂಕಿತರು ಕೋಣೆಗಳ ಕಿಟಕಿಯಿಂದ ಎಲ್ಲೆಂದರಲ್ಲಿ ಉಗುಳುತ್ತಿದ್ದಾರೆ ಎಂದು ಗೊಲಾಘಾಟ್​ನ ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವರು ಆಸ್ಪತ್ರೆಗೆ ಬರುವ ಮೊದಲು ಈ ಕೃತ್ಯ ನಡೆದಿದೆ. ಎಂಟು ಸೋಂಕಿತರ ಜತೆ ನೇರ ಸಂಪರ್ಕ ಹೊಂದಿರುವ 42 ಜನರನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net