

ಮುಂಬೈ: ಮಾರಕ ಕರೊನಾ ವೈರಸ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್ (ಮುಖವಾಡ) ಧರಿಸುವುದು ಸಾಮಾನ್ಯ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ಗಳಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ ಅದರ ಬೆಲೆ ದುಬಾರಿಯಾಗಿರುವುದರಿಂದ ಕೆಲವರು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.
ಮನೆಯಲ್ಲೇ ಯುವತಿ ಸರಳವಾಗಿ ಮಾಸ್ಕ್ ತಯಾರಿಸುವ ವಿಧಾನದ ವಿಡಿಯೋ ಒಂದನ್ನು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಅಪ್ಲೋಡ್ ಆದ ಕೆಲವೇ ನಿಮಿಷಗಳಲ್ಲಿ ಅಧಿಕ ಮಂದಿಯನ್ನು ತಲುಪಿದೆ.
ವಿಡಿಯೋದಲ್ಲಿ ಏನಿದೆ? ಯುವತಿ ಟಿಶ್ಯೂ ಪೇಪರ್ ಒಂದನ್ನು ತೆಗೆದುಕೊಂಡು ಅದನ್ನು ಮಡಚಿಕೊಳ್ಳುತ್ತಾರೆ. ಬಳಿಕ 2 ರಬ್ಬರ್ ಬ್ಯಾಂಡ್ ಅನ್ನು ಟಿಶ್ಯೂ ಪೇಪರ್ಗೆ ಸಿಕ್ಕಿಸಿ ಸ್ಟ್ಯಾಪ್ಲರ್ನಿಂದ ಪಿನ್ ಮಾಡುತ್ತಾರೆ. ಇಲ್ಲಿಗೆ ಮಾಸ್ಕ್ ಸಿದ್ಧಗೊಳ್ಳುತ್ತದೆ. ಬಳಿಕ ಅದನ್ನು ಧರಿಸುತ್ತಾರೆ.
ಸರಳವಾಗಿ ಮಾಸ್ಕ್ ತಯಾರಿಸುವ ಮಾಹಿತಿ ನೀಡಿದ ಉದ್ಯಮಿ ಆನಂದ್ ಮಹೀಂದ್ರಾ ಅವರಿಗೆ ವಿಡಿಯೋ ವೀಕ್ಷಣೆ ಮಾಡಿದವರು ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್)