ಇನ್ನು ಮುಂದೆ ಕರೊನಾ ವೈರಸ್​ ಹೆಲ್ತ್ ಬುಲೆಟಿನ್ ಬಿಡುಗಡೆ ಜವಾಬ್ದಾರಿ ಸಚಿವ ಸುರೇಶ್​ ಕುಮಾರ್​ ಹೆಗಲಿಗೆ

Suresh Kumar 11 March 20
Published on

ಬೆಂಗಳೂರು: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ನಡುವಿನ ಮುಸುಕಿನ ಗುದ್ದಾಟಕ್ಕೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತೆರೆ ಎಳೆದಿದ್ದಾರೆ.

ರಾಜ್ಯದಲ್ಲಿ ಕರೊನಾ ವೈರಸ್​ ಸೋಂಕು ಬಗ್ಗೆಯ ಎಲ್ಲ ಮಾಹಿತಿಯನ್ನು ಇನ್ನು ಮುಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ನೀಡುತ್ತಾರೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಸಂಪುಟದ ಸಚಿವರೊಂದಿಗೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ಕರೊನಾ ವೈರಸ್​ ಬಗ್ಗೆ ಎಲ್ಲ ಮಾಹಿತಿಯನ್ನು ನೀಡುವಂತೆ ಸಚಿವ ಸುರೇಶ್​ ಕುಮಾರ್​ ಅವರಿಗೆ ಸೂಚಿಸಿದರು.

ಕರೊನಾ ವೈರಸ್​ ಸೋಂಕು ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್​ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿತ್ತು. ಹೀಗಾಗಿ ಅಂಕಿ-ಅಂಶ ನೀಡುವಲ್ಲಿ ದ್ವಂದ್ವ ಉಂಟಾಗುತ್ತಿತ್ತು. ಇದರಿಂದ ಸಿಎಂಗೆ ಮುಜುಗರ ಉಂಟಾಗಿತ್ತು. ಹೀಗಾಗಿ ಅವರು ಈ ಜವಾಬ್ದಾರಿಯನ್ನು ಹಿರಿಯ ಸಚಿವ ಸುರೇಶ್​ ಕುಮಾರ್​ ಅವರಿಗೆ ವಹಿಸಿದರು.

ವಿಧಾನಸೌಧದಲ್ಲಿ ಪ್ರತಿ ದಿನ ಸಂಜೆ 5.30ಕ್ಕೆ ಸಚಿವ ಸುರೇಶ್​ ಕುಮಾರ್​ ಕರೊನಾ ವೈರಸ್​ ಕುರಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net