video/ ಕರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್​ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Corona patient Escape
Published on

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 11.30ರ ಸುಮಾರಿನಲ್ಲಿ ಕರೊನಾ ಸೋಂಕಿತನೊಬ್ಬ ಸೆಕ್ಯೂರಿಟಿಗಳಿಗೆ ಉಗಿದು ಎಸ್ಕೇಪ್​ ಆಗಿದ್ದಾನೆ. ಸಿಬ್ಬಂದಿ ಬೆನ್ನಟ್ಟಿದರೂ ತಪ್ಪಿಸಿಕೊಂಡು ಓಡಿಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪರಾರಿಯಾದ ಸೋಂಕಿತ ವ್ಯಕ್ತಿಯು ಬ್ಯ್ಲಾಕ್​ ಟೀ ಶರ್ಟ್, ಜೀನ್ಸ್ ಪ್ಯಾಂಟ್​ ಧರಿಸಿದ್ದ. ಈತನ ಮುಖಚಹರೆಯುಳ್ಳ ವ್ಯಕ್ತಿ ಕಂಡು ಬಂದಲ್ಲಿ ಜನರು ಸಮೀಪದ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಎಸ್ಕೇಪ್​ ಆಗಿರುವ ಸೋಂಕಿತನ ಪತ್ತೆಗೆ ಸಹಕರಿಸಬೇಕು. ಅಲ್ಲದೆ ಮುಂದಾಗುವ ಅನಾಹುತ ತಪ್ಪಿಸಬೇಕು. ಇದನ್ನೂ ಓದಿರಿ ಎಚ್ಚರ! ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್, ನಿಮ್ಮ ಬಳಿಯೂ ಆತ ಬರಬಹುದು…

ಆಸ್ಪತ್ರೆಯಿಂದ ಪರಾರಿಯಾದ ವ್ಯಕ್ತಿಯು ಗಲಾಟೆ ಕೇಸ್​ನಲ್ಲಿ ಬಂಧಿತನಾಗಿದ್ದ. ಈತನಿಗೆ ನಿನ್ನೆ ಸಂಜೆ(ಮಂಗಳವಾರ) ಕರೊನಾ ಸೋಂಕು ದೃಢಪಟ್ಟಿತ್ತು. ಐಸೋಲೇಷನ್​ ವಾರ್ಡ್​ನಲ್ಲಿ ಟ್ರೀಟ್​ಮೆಂಟ್​ ಕೊಡಲಾಗುತಿತ್ತು. ಆದರೆ, ಇಂದು ಏಕಾಏಕಿ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಬೆಂಗಳೂರಿನ ಜನರಿಗೆ ಆತಂಕ ತಂದೊಡ್ಡಿದ್ದಾನೆ. ಈತ ಹೆಚ್ಚು ದೂರ ಕ್ರಮಿಸಿದಷ್ಟೂ ಸೋಂಕಿತರ ಪ್ರಮಾಣವೂ ಹೆಚ್ಚಲಿದೆ.

ಈ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಯಾರಾದರೂ ನೋಡಿದ್ರೆ ಕೂಡಲೇ ಪೊಲೀಸರಿಗೆ ತಿಳಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net