ಹೊಸ ರೂಪಾಂತರ ಕರೊನಾ ಭೀತಿ: ಇಂದಿನಿಂದ ಮತ್ತೆ ನೈಟ್​ ಕರ್ಫ್ಯೂ ಜಾರಿ

Night Curfew
Published on

ಬೆಂಗಳೂರು: ಹೊಸ ರೂಪಾಂತರ ಕರೊನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಕರ್ಫ್ಯೂ ಜಾರಿ ಮಾಡಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆದೇಶಿಸಿದ್ದಾರೆ.

ಕರೊನಾದ ಹೊಸ ಪ್ರಬೇಧ ಹಾಗೂ ಎರಡನೇ ಅಲೆ ಆತಂಕ ಹಿನ್ನೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಜ.2ರವರೆಗೆ ರಾತ್ರಿ‌ ನೈಟ್​ ಕರ್ಫ್ಯೂ ಜಾರಿಯಾಗಿದೆ. ಕೋವಿಡ್​ ಟೆಕ್ನಿಕಲ್​ ಟೀಂನ ಸಲಹೆಯಂತೆ ಕರ್ಫ್ಯೂ ಜಾರಿಯಲ್ಲಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್​ ಆಗಲಿವೆ.

10 ದಿನಗಳ ಕಾಲ ಅಂದರೆ ಇಂದಿನಿಂದ ಜ.2ರ ವರೆಗೆ ರಾತ್ರಿ‌ 10 ರಿಂದ ಬೆಳಗ್ಗೆ ‌6ರ ವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಹೊಸ ವರ್ಷದ ಸಂಭ್ರಮಾಚಾರಣೆಯ ಪಾರ್ಟಿಗಳು ಸ್ಥಗಿತ ಆಗಲಿವೆ. ಈಗಾಗಲೇ ಬುಕಿಂಗ್​ ಮಾಡಿಕೊಂಡಿದ್ದ ಪಾರ್ಟಿಗಳೂ ಕ್ಯಾನ್ಸಲ್​ ಆಗಲಿವೆ. ರಾತ್ರಿ 10ರ ಬಳಿಕ ಬಿಎಂಟಿಸಿ ಬಸ್​ ಇರಲ್ಲ.

ಹೊಸ ರೂಪಾಂತರ ಕರೊನಾ ವೈರಲ್​ ಪತ್ತೆ ಹಚ್ಚಲು ನಿಮ್ಹಾನ್ಸ್, ವೈರಲಾಜಿ ಸೇರಿ ನಾಲ್ಕು ಕಡೆ ಟೆಸ್ಟಿಂಗ್​ ವ್ಯವಸ್ಥೆ ಇದೆ. ನಮ್ಮಲ್ಲಿ ಇನ್ನೂ ಆ ಮಾದರಿಯ ವೈರಸ್ ಪತ್ತೆಯಾಗಿಲ್ಲ. ಅಂತಹ ಪ್ರಕರಣ ಬಂದರೆ ಹೆಚ್ಚು ಟೆಸ್ಟ್ ಮಾಡುತ್ತೇವೆ. ಟೆಸ್ಟ್‌ ಮಾಡಲು ಯಾವುದೇ ಚಾರ್ಜ್ ಇಲ್ಲ. ಹಳೇ ಮಾದರಿಯಲ್ಲೇ ಚಿಕಿತ್ಸೆ ಮುಂದುವರಿಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net