ಕರೊನಾ ಸೋಂಕಿನಿಂದ ಪುತ್ತಿಗೆ ಶ್ರೀಗಳು ಗುಣಮುಖ

Puttige Seer
Published on

ಉಡುಪಿ: ಪುತ್ತಿಗೆ ಮಠ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಕರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು(ಶನಿವಾರ) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಶ್ರೀ ಸುಗುಣೇಂದ್ರ ತೀರ್ಥರು ಹರಿ-ವಾಯು-ಗುರುಗಳ ಕಾರುಣ್ಯದ ಫಲವಾಗಿ ಅಸ್ಪತ್ರೆಯಿಂದ ಬಿಡುಗಡೆಗೊಂಡು ಉಡುಪಿಯ ಶ್ರೀಮಠ ತಲುಪಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು, ತುಸು ಕಾಲ ಶ್ರೀಗಳು ವಿಶ್ರಾಂತಿಯಲ್ಲಿ ಇರಲಿದ್ದಾರೆ. ಅನಾರೋಗ್ಯ ಕಾಲದಲ್ಲಿ ಕ್ಷೇಮ ವಿಚಾರಿಸಿ ಪ್ರೀತಿ ತೋರಿದ ಎಲ್ಲರಿಗೂ ಶ್ರೀಕೃಷ್ಣ-ವಿಠಲ- ಮುಖ್ಯಪ್ರಾಣರ ಕಾರುಣ್ಯ ಪ್ರಾಪ್ತವಾಗುವಂತೆ ಶ್ರೀಗಳು ಪ್ರಾರ್ಥಿಸಿರುತ್ತಾರೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜು.21ರಂದು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ನಡುವೆಯೂ ಶ್ರೀಗಳು ಪ್ರತಿದಿನ ನಿರಂತರ ಪೂಜೆ, ಅನುಷ್ಠಾನದಲ್ಲಿ ತೊಡಗಿದ್ದರು. ಶ್ರೀಗಳ ಆರೋಗ್ಯ ಸುಧಾರಣೆಗಾಗಿ ವಿವಿಧೆಡೆ ಭಕ್ತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net