

ಬೆಂಗಳೂರು: ರಾಜ್ಯದಲ್ಲಿ ಗಾರ್ಮೆಂಟ್ ಉದ್ಯಮವನ್ನೇ ನಂಬಿ ಬದುಕುತ್ತಿರುವ ಸುಮಾರು 3 ಲಕ್ಷ ಕಾರ್ವಿುಕರು ಕರೊನಾಘಾತದಿಂದಾಗಿ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಕರ್ನಾಟಕದ ಗಾರ್ಮೆಂಟ್ಸ್ ಉದ್ಯಮಕ್ಕೆ ಅಮೆರಿಕ, ಐರೋಪ್ಯ ದೇಶಗಳೇ ದೊಡ್ಡ ಮಾರುಕಟ್ಟೆ. ಇಲ್ಲಿ ಸಿದ್ಧವಾಗುವ ಶೇ. 50 ಉತ್ಪನ್ನಗಳು ವಿದೇಶಕ್ಕೆ ರಫ್ತಾಗುತ್ತವೆ. ಆದರೆ ಅಲ್ಲೂ ಕೂಡ ಕರೊನಾ ಗ್ರಹಣ ಕವಿದಿರುವುದರಿಂದ ಉದ್ಯಮ ಬಂದ್ ಆಗಿದೆ. ಪರಿಣಾಮ ರಾಜ್ಯದ ಉತ್ಪನ್ನಗಳನ್ನು ಕೇಳುವವರೇ ಇಲ್ಲವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಸುಧಾರಿಸಿಕೊಳ್ಳುವುದಕ್ಕೆ ಹಲವಾರು ವರ್ಷಗಳೇ ಬೇಕಿದೆ. ಹೀಗಾಗಿ ಶೇ.50ಕ್ಕೂ ಹೆಚ್ಚು ಜನರು ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.
ಬೇಡಿಕೆ ಇಲ್ಲದೆ ಉತ್ಪಾದನೆ ಕಷ್ಟ: ಗಾರ್ಮೆಂಟ್ ಉದ್ಯಮದಲ್ಲಿ ಬೇಡಿಕೆ ಇಲ್ಲದೆ ಉತ್ಪಾದನೆ ಮಾಡುವುದು ಕಷ್ಟ. ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಬಂದ್ ಆಗಿರುವ ಕಾರಣ ಇಲ್ಲಿ ಉತ್ಪಾದನೆಯೂ ಬಂದ್ ಆಗಲಿದೆ. ಲಾಕ್ಡೌನ್ ಮುಗಿದ ಬಳಿಕವೂ ಗಾರ್ಮೆಂಟ್ಸ್ಗಳು ಕೆಲಸ ಮಾಡಲಾಗದ ಪರಿಸ್ಥಿತಿ ನಿರ್ವಣವಾಗಿದೆ.
ಬಡಕುಟುಂಬಗಳೇ ಅಧಿಕ:ಗಾರ್ಮೆಂಟ್ ನೌಕರರ ಪೈಕಿ ಗ್ರಾಮೀಣ ಭಾಗದ ಬಡ ಕುಟುಂಬಗಳೇ ಹೆಚ್ಚು. ಅದರಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರೆಲ್ಲ ಕೆಲಸ ಕಳೆದುಕೊಂಡಲ್ಲಿ ಸಾಮಾಜಿಕ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯೂ ಇದೆ. ಆರು ಲಕ್ಷ ಕಾರ್ವಿುಕರು ರಾಜ್ಯದ ಗಾರ್ಮೆಂಟ್ಗಳಲ್ಲಿ 6 ಲಕ್ಷ ಕಾರ್ವಿುಕರಿದ್ದಾರೆ. ನೋಂದಾಯಿತ ಗಾರ್ಮೆಂಟ್ಸ್ ನೌಕರರನ್ನು ಹೊರತುಪಡಿಸಿ ಇನ್ನೂ ಒಂದು ಲಕ್ಷ ಜನರು ಈ ಉದ್ಯಮ ಅವಲಂಬಿಸಿದ್ದಾರೆ ಎಂಬ ಅಂದಾಜಿದೆ.
ಬೆಂಗಳೂರಿನಲ್ಲೇ ಹೆಚ್ಚು ಘಟಕ: ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಗಾರ್ಮೆಂಟ್ಗಳಿವೆ. ಈ ಪೈಕಿ ಬೆಂಗಳೂರಲ್ಲೇ ಅತಿ ಹೆಚ್ಚು ಕಾರ್ಖಾನೆಗಳಿವೆ. ಪೀಣ್ಯ, ದಾಸರಹಳ್ಳಿ, ಹೊಸೂರು ಭಾಗದಲ್ಲಿ ಹೆಚ್ಚು ಉದ್ಯಮಗಳಿದ್ದರೆ, ಸಣ್ಣ ಪುಟ್ಟ ಗಾರ್ಮೆಂಟ್ಸ್ ಬೆಂಗಳೂರಿನ ಬಹುತೇಕ ಕಡೆ ನೆಲೆ ಕಂಡುಕೊಂಡಿವೆ. ಇದನ್ನು ಹೊರತುಪಡಿಸಿದರೆ, ಚನ್ನಪಟ್ಟಣ, ಮಂಡ್ಯ, ಮೈಸೂರು, ಹಾಸನ, ಮಂಗಳೂರು, ಹುಬ್ಬಳ್ಳಿಗಳಲ್ಲೂ ಲಕ್ಷಾಂತರ ನೌಕರರಿಗೆ ಉದ್ಯೋಗ ನೀಡಿವೆ.
11 ಸಾವಿರ ಕೋಟಿ ರೂ. ರಫ್ತು: ಗಾರ್ಮೆಂಟ್ ಉದ್ಯಮದಲ್ಲಿ ಸದ್ಯ ರಾಜ್ಯದಲ್ಲಿ ಪ್ರತಿ ವರ್ಷ 23 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದರಲ್ಲಿ 11 ಸಾವಿರ ಕೋಟಿ ರೂ. ರಫ್ತು ವಹಿವಾಟು ಸೇರಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರಫ್ತು ವಹಿವಾಟು ನಡೆಯುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ.
ಹೊಸ ನೀತಿಗೆ ಸಿದ್ಧತೆ: ಹೊಸ ಜವಳಿ ನೀತಿ ಪ್ರಕಟಿಸಲು ಸಿದ್ಧತೆ ನಡೆಸಿದ್ದ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಹೂಡಿಕೆ ಹಾಗೂ 5 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿ ಉದ್ದೇಶ ಹೊಂದಿತ್ತು. ಮೂಲ ಸೌಕರ್ಯಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ 2000 ಕೋಟಿ ರೂ. ವೆಚ್ಚ ಮಾಡಲು ತೀರ್ಮಾನಿಸಿತ್ತು. ಆದರೆ ಈಗ ಇದಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಮಾರುಕಟ್ಟೆಯಲ್ಲಿ ಬೆಂಗಳೂರು ಗಾರ್ಮೆಂಟ್ಸ್ ಉದ್ಯಮ ತನ್ನದೇ ಆದ ಅನ್ವೇಷಣೆಗಳಿಂದ ವಿಶೇಷ ಗಮನ ಸೆಳೆದಿದೆ. ಲಾಕ್ಡೌನ್ ಬಳಿಕ ಸದ್ಯಕ್ಕೆ ಶೇ.50 ಉತ್ಪನ್ನಗಳನ್ನಷ್ಟೇ ಉತ್ಪಾದನೆ ಮಾಡಬಹುದು. ಈಗಿರುವ ಕಾರ್ವಿುಕರಲ್ಲಿ ಅರ್ಧದಷ್ಟು ಜನರಿಗೆ ಕೆಲಸವಿಲ್ಲದಂತಾಗಬಹುದು. | ಮಾನವ ಸಂಪನ್ಮೂಲ ಅಧಿಕಾರಿ, ಗಾರ್ಮೆಂಟ್ ಉದ್ಯಮ. ಬೆಂಗಳೂರು ನಮ್ಮ ಗಾರ್ಮೆಂಟ್ಸ್ನಲ್ಲಿ 15 ಸಾವಿರ ಕಾರ್ವಿುಕರು ಕೆಲಸ ಮಾಡುತ್ತಿದ್ದಾರೆ. ಕಂಪನಿಯ ಉತ್ಪನ್ನವೆಲ್ಲವೂ ಅಮೆರಿಕ, ಯುರೋಪಿಯನ್ ದೇಶಗಳಿಗೆ ರಫ್ತಾಗುತ್ತಿತ್ತು. ಸದ್ಯಕ್ಕೆ ಆ ದೇಶಗಳಿಂದ ಬೇಡಿಕೆ ಬರುವ ಲಕ್ಷಣಗಳಿಲ್ಲ. ಹಾಗಾಗಿ ತಕ್ಷಣಕ್ಕೆ ಗಾರ್ಮೆಂಟ್ಸ್ ಫ್ಯಾಕ್ಟರಿ ಪ್ರಾರಂಭಿಸುವುದು ಕಷ್ಟದ ಕೆಲಸ. ಮುಂದೇನು ಎಂದು ಚಿಂತಿತರಾಗಿದ್ದೇವೆ. | ಹೆಸರು ಹೇಳಿಕೊಳ್ಳದ ಗಾರ್ಮೆಂಟ್ಸ್ ಉದ್ಯಮಿ.
ಶಿವಾನಂದ ತಗಡೂರು