ಮಹಾರಾಷ್ಟ್ರ: ಡೆಲ್ಟಾ ಪ್ಲಸ್​ ಸೋಂಕಿನಿಂದ ಮೂರು ಸಾವು

coronavirus
Published on

ಮುಂಬೈ : ಡೆಲ್ಟಾ ಪ್ಲಸ್​ ಕರೊನಾ ರೂಪಾಂತರಿ ಸೋಂಕಿನಿಂದಾಗಿ ಈವರೆಗೆ ಮಹಾರಾಷ್ಟ್ರದಲ್ಲಿ ಮೂರು ಸಾವುಗಳು ವರದಿಯಾಗಿದ್ದು, ಮೂರೂ ಪ್ರಕರಣಗಳು ಹಿರಿಯ ನಾಗರೀಕರದ್ದಾಗಿವೆ.

ಮುಂಬೈನ 63 ವರ್ಷ ವಯಸ್ಸಿನ ಕರೊನಾ ಸೋಂಕಿತ ಮಹಿಳೆಯು ಜುಲೈ 27 ರಂದು ಮೃತಪಟ್ಟಿದ್ದು, ಜಿನೋಮ್​ ಸೀಕ್ವೇಂಸಿಂಗ್​ನಿಂದ ಅವರು ಡೆಲ್ಟಾ ಪ್ಲಸ್​ ರೂಪಾಂತರಿಯ ಸೋಂಕು ಹೊಂದಿದ್ದರೆಂಬುದು ಇದೀಗ ಖಚಿತವಾಗಿದೆ. ಕಳೆದ ತಿಂಗಳಲ್ಲಿ ರಾಯಗಡದ 69 ವರ್ಷದ ಪುರುಷ ಮತ್ತು ರತ್ನಗಿರಿಯ 80 ವರ್ಷದ ಮಹಿಳೆ ಇದೇ ರೂಪಾಂತರಿಯ ಸೋಂಕಿನಿಂದ ಮೃತಪಟ್ಟಿದ್ದರು.

ಇತ್ತೀಚೆಗೆ ಮೃತಪಟ್ಟ ಮುಂಬೈನ ಸೋಂಕಿತೆಯು ಹಲವು ಕೋರ್ಮಾರ್ಬಿಡಿಟೀಸ್​ ಹೊಂದಿದ್ದರು. ಆಕ್ಸಿಜನ್​ ಸಪೋರ್ಟ್​ ಕೊಟ್ಟು, ರೆಮ್​ಡೆಸಿವಿರ್​ ಚುಚ್ಚುಮದ್ದಿನಿಂದ ಕೂಡ ಚಿಕಿತ್ಸೆ ನೀಡಲಾಗಿದ್ದರೂ ಫಲಕಾರಿಯಾಗಿರಲಿಲ್ಲ. ನಗರದಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿಗೆ ಪಾಸಿಟೀವ್ ಬಂದಿದ್ದ ಏಳು ಜನರಲ್ಲಿ ಒಬ್ಬರಾಗಿದ್ದ ಈಕೆ ಕರೊನಾ ಲಸಿಕೆ ಕೂಡ ಪಡೆದಿದ್ದರು ಎನ್ನಲಾಗಿದೆ.

ಮುಂಬೈನ 7 ಜನ ಸೋಂಕಿತರೊಂದಿಗೆ ಬೇರೆ ಜಿಲ್ಲೆಗಳಲ್ಲಿ ಇನ್ನೂ 13 ಜನರಲ್ಲಿ ಡೆಲ್ಟಾಪ್ಲಸ್​ ರೂಪಾಂತರಿಯ ಸೋಂಕು ಕಂಡುಬಂದಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ದೇಶಾದ್ಯಂತ ಈವರೆಗೆ 65 ಸೋಂಕು ಪ್ರಕರಣಗಳಲ್ಲಿ ಈ ರೂಪಾಂತರಿ ಕಂಡುಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net