ಕರೊನಾ ಬುಲೆಟಿನ್​: ಇವತ್ತು ಸಾವಲ್ಲೇ ಶತಕ..😥😥

Corona
Published on

ಬೆಂಗಳೂರು: ರಾಜ್ಯದಲ್ಲಿ ಶನಿವಾರ ಹೊಸದಾಗಿ 9,886 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಪ್ರಮಾಣ 6,30,516ಕ್ಕೆ ತಲುಪಿದೆ.

ಮತ್ತೊಂದೆಡೆ 8,989 ಮಂದಿ ಗುಣವಾಗಿ ಶನಿವಾರವೊಂದೇ ದಿನ ಬಿಡುಗಡೆ ಆಗಿದ್ದು, ಇದುವರೆಗೆ ಗುಣವಾಗಿರುವವರ ಒಟ್ಟು ಸಂಖ್ಯೆ 5,08,495ಕ್ಕೆ ಏರಿದೆ. ಅದಾಗ್ಯೂ ರಾಜ್ಯದಲ್ಲಿ ಪ್ರಸ್ತುತ 1,12,783 ಸಕ್ರಿಯ ಪ್ರಕರಣಗಳು ಇದ್ದು, 841 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೇಸರ ವಿಷಯವೆಂದರೆ ಒಂದೇ ದಿನದಲ್ಲಿ, ಅಂದರೆ ಶನಿವಾರ ನೂರು ಮಂದಿ ಕರೊನಾಗೆ ಬಲಿಯಾಗಿದ್ದಾರೆ. ಇದುವರೆಗೆ 9,219 ಮಂದಿ ಕರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net