ಜೋಳದ ಮುದ್ದೆ ಹೃದಯದ ಆರೋಗ್ಯಕ್ಕೆ ಬೆಸ್ಟ್​ ! | Cornmeal lump

Cornmeal lump
Published on

Cornmeal lump: ಭಾರತದಲ್ಲಿ ಆಹಾರದ ವೈವಿದ್ಯತೆ ತಿಳಿಯಬೇಕಾದರೆ ಕರ್ನಾಟಕದತ್ತ ಒಮ್ಮೆ ದೃಷ್ಠಿ ಹಾಯಿಸಲೆಬೇಕು, ಇಲ್ಲಿನ ಆಹಾರಗಳು ಕೇವಲ ನಾಲಿಗೆಗೆ ರುಚಿ ನೀಡುವುದಷ್ಟೆ ಅಲ್ಲದೆ ತೋಳಿಗೆ ಬಲ ನೀಡುತ್ತವೆ. ಬೀದರ್​ನಿಂದ ಚಾಮರಾಜನಗರದವರೆಗೂ ಪ್ರತಿ ಭಾಗದಲ್ಲಿ ಬೇರೆ ಬೇರೆ ರೀತಿಯ ಆಹಾರ ಪದಾರ್ಥಗಳನ್ನು ಸವಿಯುವ ಭಾಗ್ಯವನ್ನು ಇಲ್ಲಿನ ಜನ ಪಡೆದುಕೊಂಡಿದ್ದಾರೆ ಎಂದರೆ ಅತಿಶಯೋಕ್ತಿ ಆಗದು.

ದಕ್ಷಿಣ ಕರ್ನಾಟಕ, ಅದರಲ್ಲೂ ವಿಶೇಷವಾಗಿ ಹಳೇ ಮೈಸೂರು ಭಾಗದ ಜನಪ್ರಿಯ ಆಹಾರವೆಂದರೆ ಅದು ರಾಗಿ ಮುದ್ದೆ, ಆ ಭಾಗದ ಜನ ತುಂಬಾ ಇಷ್ಟಪಟ್ಟು ಹೆಮ್ಮೆಯಿಂದ ತಿನ್ನುವ ಪದಾರ್ಥದಲ್ಲಿ ರಾಗಿ ಮುದ್ದೆ ಅಗ್ರಸ್ಥಾನ ಪಡೆದುಕೊಂಡಿದೆ.

ಅದೇ ರೀತಿ ಹಾಗೇ ದಕ್ಷಿಣ ಕರ್ನಾಟಕವನ್ನು ದಾಟಿ ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗವನ್ನು ಪ್ರವೇಶಿಸುತ್ತಿದ್ದಂತೆ ಜೋಳದಿಂದ ತಯಾರಿಸುವ ಖಾದ್ಯಗಳು ನಿಮ್ಮನ್ನು ಸದ್ದಿಲ್ಲದೆ ಆಕರ್ಷಿಸುತ್ತವೆ.

ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಜನಪ್ರಿಯವಾದ ಆಹಾರ ಎಂದರೇ ಅದು ಜೋಳದ ರೊಟ್ಟಿ ಮತ್ತು ಜೋಳದ ಹಿಟ್ಟಿನಿಂದ ತಯಾರಿಸಲಾಗುವ ಮುದ್ದೆ. ಈ ಪದಾರ್ಥ ರುಚಿಕರವಾಗಿರುವುದರ ಜೊತೆ ಜೊತೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳು ಏನೇನು ಎಂಬುದನ್ನೋಮ್ಮೆ ತಿಳಿದುಕೊಳ್ಳೋಣ ಬನ್ನಿ.

ಜೋಳದ ಮುದ್ದೆಯ ಆರೋಗ್ಯ ಪ್ರಯೋಜನಗಳು

1. ಪೌಷ್ಟಿಕಾಂಶಗಳ ಶ್ರೀಮಂತ ಮೂಲ

ಜೋಳದ ಮುದ್ದೆಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಫೈಬರ್, ವಿಟಮಿನ್ ಬಿ (ನಿಯಾಸಿನ್, ಥಯಾಮಿನ್), ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಕಬ್ಬಿಣದಂತಹ ಖನಿಜಗಳಿವೆ. ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ, ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದಿನವಿಡೀ ಶಕ್ತಿಯನ್ನು ನೀಡುವ ಆಹಾರವಾಗಿದೆ.

2. ಜೀರ್ಣಕ್ರಿಯೆಗೆ ಸಹಕಾರಿ

ಜೋಳದ ಮುದ್ದೆಯಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಇದನ್ನು ತರಕಾರಿಗಳು ಮತ್ತು ಕಾಳುಗಳೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಇನ್ನಷ್ಟು ಸುಧಾರಿಸುತ್ತದೆ.

3. ಗ್ಲೂಟನ್-ಮುಕ್ತ ಆಹಾರ

ಜೋಳದ ಮುದ್ದೆ ಗ್ಲೂಟನ್ ಮುಕ್ತವಾಗಿದೆ, ಗ್ಲೂಟನ್ ಅಲರ್ಜಿ ಅಥವಾ ಸೀಲಿಯಾಕ್ ಕಾಯಿಲೆಯಿಂದ ಬಳಲುವವರಿಗೆ ಇದು ಉತ್ತಮ ಆಯ್ಕೆಯಾಗಿದ್ದು, ಇದು ಗೋಧಿಯಿಂದ ತಯಾರಾದ ಆಹಾರಗಳಿಗೆ ಪರ್ಯಾಯ ಆಯ್ಕೆಯಾಗಿದೆ.

4. ಸಕ್ಕರೆ ರೋಗ ನಿಯಂತ್ರಣ

ಜೋಳದ ಮುದ್ದೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ (GI) ಕಡಿಮೆಯಿರುತ್ತದೆ, ಇದರಿಂದ ಸಕ್ಕರೆ ಮಟ್ಟವು ತಕ್ಷಣವೇ ಏರಿಕೆಯಾಗುವುದಿಲ್ಲ. ಇದು ಮಧುಮೇಹಿಗಳಿಗೆ ಸೂಕ್ತವಾದ ಆಹಾರವಾಗಿದೆ. ಫೈಬರ್ ಒಳಗೊಂಡಿರುವುದರಿಂದ ಇದು ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತದೆ.

5. ಹೃದಯದ ಆರೋಗ್ಯಕ್ಕೆ ಬೆಸ್ಟ್​

ಜೋಳದ ಮುದ್ದೆಯಲ್ಲಿ ಕೊಬ್ಬಿನಾಂಶ ಕಡಿಮೆ ಮತ್ತು ಫೈಬರ್ ಹೆಚ್ಚಿರುವುದರಿಂದ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೊತೆಗೆ, ಜೋಳದಲ್ಲಿರುವ ಉತ್ಕರ್ಷಣ ನಿರೋಧಕಗಳು ಧಮನಿಗಳಲ್ಲಿ ಕೊಬ್ಬಿನ ಸಂಗ್ರಹವನ್ನು ಕಡಿಮೆ ಮಾಡುತ್ತವೆ, ಇದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ.

6. ತೂಕ ನಿಯಂತ್ರಣಕ್ಕೆ ಸಹಾಯ

ಜೋಳದ ಮುದ್ದೆ ಕಡಿಮೆ ಕ್ಯಾಲೋರಿಯನ್ನು ಒಳಗೊಂಡಿದ್ದು, ಫೈಬರ್‌ನಿಂದ ತುಂಬಿರುವುದರಿಂದ ತಕ್ಷಣವೇ ಹೊಟ್ಟೆ ತುಂಬಿದ ಭಾವನೆಯನ್ನು ನೀಡುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ ಮತ್ತು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಇದನ್ನು ತರಕಾರಿಗಳೊಂದಿಗೆ ಸೇವಿಸಿದರೆ ಆರೋಗ್ಯಕರ ತೂಕ ನಿರ್ವಹಣೆ ಸುಲಭವಾಗುತ್ತದೆ.

7. ನೈಸರ್ಗಿಕ ಶಕ್ತಿಯ ಮೂಲ

ಜೋಳದ ಮುದ್ದೆ ದೀರ್ಘಕಾಲದವರೆಗೆ ಶಕ್ತಿಯನ್ನು ಒದಗಿಸುವ ಆಹಾರವಾಗಿದೆ. ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ, ಆದರೆ ಫೈಬರ್ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ದಿನವಿಡೀ ಚೈತನ್ಯವಾಗಿರಲು ಸಾಧ್ಯ.(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net