ಸಹಕಾರ ಸಂಘದ ಕಾರ್ಯದರ್ಶಿ ಆತ್ಯಹತ್ಯೆ; ಡೆತ್‌ನೋಟ್ ಆಧರಿಸಿ ಪ್ರಿಯಕರ ಸೆರೆ

29 smg nagendra
Published on

ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆಕೆ ಬರೆದಿದ್ದ ಡೆತ್‌ನೋಟ್ ಆಧಾರದ ಮೇಲೆ ಪ್ರಿಯಕರನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.

ಮಹಾನಗರ ಪಾಲಿಕೆ ವಾಹನ ಚಾಲಕ ನಾಗೇಂದ್ರ ಬಂಧಿತ ಆರೋಪಿ. ಜ.25ರಂದು ಗಾರ್ಡನ್ ಏರಿಯಾದ ಸಹಕಾರ ಸಂಘದ ಕಾರ್ಯದರ್ಶಿ ಅನಿತಾ ಅವರು ಕಚೇರಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರಿಗೆ ಅನಿತಾ ಬರೆದಿಟ್ಟಿದ್ದ ಡೆತ್‌ನೋಟ್ ಸಿಕ್ಕಿದ್ದು ಮದುವೆಯಾಗುವುದಾಗಿ ನಾಗೇಂದ್ರ ನಂಬಿಸಿದ್ದ ಎನ್ನಲಾಗಿದೆ. ಅನಿತಾ ಅವರ ಪತಿ ರಾಮಮೂರ್ತಿ ಅವರು ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಈ ವೇಳೆ ಅನಿತಾಗೆ ನಾಗೇಂದ್ರನ ಪರಿಚಯವಾಗಿತ್ತು. ಅನ್ಯೋನ್ಯತೆಯಿಂದ ಇಬ್ಬರೂ ಇದ್ದರು. ಇತ್ತೀಚಿನ ದಿನಗಳಲ್ಲಿ ಮದುವೆಯಾಗುವಂತೆ ಅನಿತಾ ಒತ್ತಾಯಿಸುತ್ತಿದ್ದರು. ಆದರೆ ಈಗಾಗಲೇ ಒಂದು ಮದುವೆಯಾಗಿದ್ದ ನಾಗೇಂದ್ರ, ಅನಿತಾಳನ್ನು ಮದುವೆಯಾಗಲು ನಿರಾಕರಿಸಿದ್ದ. ಅದೇ ಕಾರಣಕ್ಕೆ ನೊಂದು ಅನಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿಗೆ ಕೋಟ್ ಮಾಡಿ ಡೆತ್‌ನೋಟ್ ಬರೆದಿದ್ದಾರೆ ಎನ್ನಲಾಗಿದ್ದು ಪೊಲೀಸರು ನಾಗೇಂದ್ರನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net