Conviction: ಕೊಲೆ ಯತ್ನ ಮಾಡಿದವನಿಗೆ 10 ವರ್ಷ ಕಠಿಣ Punishment

conviction

ಕಾರವಾರ: ಮಹಿಳೆಯ ಕೊಲೆ ಯತ್ನ ಮಾಡಿದವನಿಗೆ 10 ವರ್ಷ ಜೈಲು ಶಿಕ್ಷೆ(Conviction) ಹಾಗೂ 10 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1  ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಯಲ್ಲಾಪುರ ತಾಲೂಕಿನ ಇಂದಿರಾ ನಗರದ ಜಾಫರ್‌ ಸಾದಿಕ್‌ ಇಮಾಮ್‌ ಪಟೇಲ್‌ ಶಿಕ್ಷೆಗೊಳಗಾದ ವ್ಯಕ್ತಿ.  ಆತನಿಂದ ಹಲ್ಲೆಗೊಳಗಾದ ಹಸೀನಾ ಸಯ್ಯದ್‌ ಶೇಖ್‌ ಎಂಬಾಕೆಗೆ 10 ಸಾವಿರ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ಇನ್ನೊಬ್ಬ ಅಪರಾಧಿ ಆಶಾಬಿ ಇಮಾಮ್‌ ಪಟೇಲ್‌ಗೆ 2 ಸಾವಿರ ರೂ. ದಂಡ ವಿಧಿಸಲಾಗಿದೆ.

Conviction ಹಿನ್ನೆಲೆ:

2021 ರಲ್ಲಿ ಅರಣ್ಯ ಅತಿಕ್ರಮಣ ವಿಷಯಕ್ಕೆ ಸಂಬಂಧ ಜಾಫರ್‌ ಹಾಗೂ ಇತರರು ಮತ್ತು  ಹಸೀನಾ ಸಯ್ಯದ್‌ ನಡುವೆ ಜಗಳ ನಡೆದಿತ್ತು. ಜಾಫರ್‌ ಹಸೀನಾ ಅವರ ತಲೆಗೆ ಕತ್ತಿಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದ. ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಯಲ್ಲಾಪುರ ಪಿಎಸ್‌ಐ ಮಂಜುನಾತ ಗೌಡರ್‌ ಪ್ರಕರಣದ ತನಿಖೆ ಕೈಗೋಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಾಜೇಶ ಎಂ. ಮಳಗೀಕರ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ಸಾಕ್ಷಿಗಳ ವಿಚಾರಣೆ ನಡೆಸಿದ ಶಿರಸಿಯ 1  ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶ ಕಿರಣ ಕಿಣಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ 2  ನೇ ಆರೋಪಿಯಾಗಿದ್ದ ಇಮಾಮ್‌ ಖಾದ್ರಿ ಪಟೇಲ್‌ ಮೃತಪಟ್ಟಿದ್ದಾರೆ. ಇನ್ನೊಬ್ಬ ಆರೋಪಿ ಅಪ್ರಾಪ್ತೆಯಾಗಿದ್ದು, ಆಕೆಯ ವಿರುದ್ಧ ಪ್ರತ್ಯೇಕ ದೋಷಾರೋಪಣಾ ಪಟ್ಟಿ ಸಿದ್ದಪಡಿಸಿ, ಬಾಲ ನ್ಯಾಯ ಮಂಡಳಿಗೆ ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಗಾಯಗೊಂಡಿರುವ ಹಸೀನಾ ಶೇಖ್‌ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರವನ್ನು ಪಡೆಯಲು ಅರ್ಹರು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

 

ಇದನ್ನೂ ಓದಿ: https://www.vijayavani.net/sparkcat-virus-will-steal-your-personal-information-on-phone

https://www.instagram.com/reel/DFx3YTiIwEs/?utm_source=ig_web_copy_link&igsh=MzRlODBiNWFlZA==

blank

 

Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…