ಆದರ್ಶಗುಣ ಅಳವಡಿಸಿ ನಾಡಿಗೆ ಕೊಡುಗೆ

tribute
Published on

ಗಂಗೊಳ್ಳಿ: ಯಾವುದೇ ವ್ಯಕ್ತಿ ಉತ್ತಮವಾಗಿ ಬೆಳೆಯಬೇಕಾದರೆ ಉತ್ತಮ ವಿದ್ಯಾಭ್ಯಾಸ ಅತ್ಯಗತ್ಯ. ಮನಮೋಹನ್ ಸಿಂಗ್ ಅವರ ವಿದ್ಯಾರ್ಥಿ ಜೀವನ ಆಕ್ಸ್‌ಫರ್ಡ್‌ನಂತಹ ಜಗದ್ವಿಖ್ಯಾತ ಸಂಸ್ಥೆಯಲ್ಲಿ ನಡೆದಿದ್ದು, ಅವರ ಜೀವನದ ಉತ್ಕರ್ಷಕ್ಕೆ ಕಾರಣವಾಯಿತು. ಅವರ ಆದರ್ಶಗುಣ ನಮ್ಮದನ್ನಾಗಿಸಿಕೊಂಡು ನಾವೆಲ್ಲ ಈ ನಾಡಿಗೆ ಕೊಡುಗೆ ನೀಡುವಂತಾಗಬೇಕು ಎಂದು ಉಪಪ್ರಾಂಶುಪಾಲ ರಾಮ ದೇವಾಡಿಗ ಹೇಳಿದರು.

ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಆರ್ಥಿಕ ತಜ್ಞ ಹಾಗೂ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಶುಕ್ರವಾರ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದರು.

ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಂಯೋಜಕಿ ಸವಿತಾ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ, ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net