More

    ಜರ್ಮನ್ ಬ್ಯಾಂಕ್‌ನಿಂದ 278 ಮಿಲಿಯನ್ ಡಾಲರ್ ಮೌಲ್ಯದ ಗುತ್ತಿಗೆ: ಎಚ್‌ಸಿಎಲ್ ಟೆಕ್ನಾಲಜೀಸ್​ ಷೇರುಗಳಿಗೆ ಬುಧವಾರ ಬರಬಹುದು ಬೇಡಿಕೆ

    ಮುಂಬೈ: ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟಿನ ಅವಧಿಯಲ್ಲಿ, ಎಚ್‌ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್‌ನ ಷೇರುಗಳ ಬೆಲೆ ಶೇಕಡಾ 0.65 ರಷ್ಟು ಸ್ವಲ್ಪ ಏರಿಕೆಯೊಂದಿಗೆ 1426 ರೂ. ತಲುಪಿತು. ಆದರೆ, ಈಗ ಬಂದಿರುವ ಸುದ್ದಿಯು ಬುಧವಾರದ ವಹಿವಾಟಿನಲ್ಲಿ ಷೇರಿನ ಬೆಲೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ.

    ಭಾರತದ ಮೂರನೇ ಅತಿದೊಡ್ಡ ಐಟಿ ಕಂಪನಿ HCLtech Ltd ಮಂಗಳವಾರ (ಜೂನ್ 11) ಜರ್ಮನಿಯ ಅತಿದೊಡ್ಡ ಸಹಕಾರಿ ಪ್ರಾಥಮಿಕ ಬ್ಯಾಂಕ್ – ಡಾಯ್ಚ ಅಪೋಥೆಕರ್-ಉಂಡ್ ಅರ್ಜ್ಟೆಬ್ಯಾಂಕ್ ಇಜಿ (ಅಪೋಬ್ಯಾಂಕ್) ಜತೆ 278 ಮಿಲಿಯನ್ ಡಾಲರ್​ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಹೇಳಿದೆ.

    ಒಪ್ಪಂದದ ಪ್ರಕಾರ, HCLTech ಕಂಪನಿಯು ಅಪೋಬ್ಯಾಂಕ್‌ಗೆ ಸ್ಕೇಲೆಬಲ್, ಉತ್ತಮ ಗುಣಮಟ್ಟದ ಮತ್ತು ಕಂಪ್ಲೈಂಟ್ ಡಿಜಿಟಲ್ ಫೌಂಡೇಶನ್ ಸೇವೆಗಳನ್ನು ಒದಗಿಸುವ ಔಟ್-ಕಮ್ ಆಧಾರಿತ ನಿರ್ವಹಣಾ ಸೇವೆ ಒದಗಿಸಬೇಕು.

    “ಅಪೋಬ್ಯಾಂಕ್‌ನಲ್ಲಿ, HCLTech ಜತೆಗಿನ ನಮ್ಮ ಪಾಲುದಾರಿಕೆಯ ವಿಸ್ತರಣೆಯನ್ನು ನಾವು ಸ್ವಾಗತಿಸುತ್ತೇವೆ” ಎಂದು ಅಪೋಬ್ಯಾಂಕ್‌ COO ಮತ್ತು ಎಕ್ಸಿಕ್ಯೂಟಿವ್ ಬೋರ್ಡ್ ಸದಸ್ಯರಾದ ಥಾಮಸ್ ರುಂಗೆ ಹೇಳಿದ್ದಾರೆ.

    “2021 ರಲ್ಲಿ ಅಪ್ಲಿಕೇಶನ್ ಸೇವೆಗಳಲ್ಲಿ ಪಾಲುದಾರಿಕೆಯ ಮೂಲಕ ಅಪೋಬ್ಯಾಂಕ್‌ HCLTech ನ ಕ್ಲೈಂಟ್ ಆಗಿ ಮಾರ್ಪಟ್ಟಿದೆ ಎಂದು HCL ಹೇಳಿದೆ.

    “ನಮ್ಮ ನಿರ್ವಹಣಾ ಮೂಲಸೌಕರ್ಯ ಮತ್ತು ಕ್ಲೌಡ್ ಸೇವೆಗಳ ವ್ಯಾಪಕ ಪೋರ್ಟ್‌ಫೋಲಿಯೊ ಜತೆಗೆ ನಮ್ಮ ದೀರ್ಘಾವಧಿಯ ಅನುಭವವನ್ನು ಬಳಸಿಕೊಂಡು ಅವರ ಗ್ರಾಹಕರಿಗೆ ಸೇವೆ ಸಲ್ಲಿಸಲು ಸಹಾಯ ಮಾಡಲು ನಾವು ಅಪೋಬ್ಯಾಂಕ್‌ನೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ” ಎಂದು HCL ಹೇಳಿಕೆಯಲ್ಲಿ ತಿಳಿಸಿದೆ.

    ಕಳೆದ ಕೆಲವು ದಿನಗಳಿಂದ ಎಚ್‌ಸಿಎಲ್‌ನ ಷೇರು ಬೆಲೆ ನಿರಂತರ ಒತ್ತಡದಲ್ಲಿಯೇ ಇತ್ತು. ಆದರೂ, ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ, ಸ್ಟಾಕ್ ಉತ್ತಮ ಚೇತರಿಕೆ ತೋರಿಸಿದೆ.

    See also  ಭಾರತದಲ್ಲಿ ಕೆಲಸ ಮಾಡ ಬಯಸುವವರು ಹಿಂದು ಸಬಲೀಕರಣಕ್ಕೆ ದುಡಿಯಬೇಕು; ಆರ್​ಎಸ್​ಎಸ್​ ಪ್ರಧಾನ ಕಾರ್ಯದರ್ಶಿ ಸುರೇಶ್​ ಭಯ್ಯಾಜಿ ಜೋಷಿ

    HDFC ಸೆಕ್ಯುರಿಟೀಸ್ HCL ಟೆಕ್ನಾಲಜೀಸ್ ಷೇರುಗಳನ್ನು ರೂ 1650 ಗುರಿ ಬೆಲೆಗೆ ಖರೀದಿಸಲು ಸಲಹೆ ನೀಡಿದೆ. HCL ಟೆಕ್ನಾಲಜೀಸ್ ಲಿಮಿಟೆಡ್ ಐಟಿ ಸಾಫ್ಟ್‌ವೇರ್ ವಲಯದ ದೊಡ್ಡ ಕ್ಯಾಪ್ ಕಂಪನಿಯಾಗಿದ್ದು, 385001.24 ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ.

    ಮಾರ್ಚ್ 31, 2024 ರಂತೆ, ಪ್ರವರ್ತಕರು ಈ ಕಂಪನಿಯಲ್ಲಿ 60.81 ಪ್ರತಿಶತ ಪಾಲನ್ನು ಹೊಂದಿದ್ದಾರೆ, ಆದರೆ, ಎಫ್‌ಐಐಗಳು 19.65 ಪ್ರತಿಶತ ಮತ್ತು ಡಿಐಐಗಳು 14.88 ಪ್ರತಿಶತವನ್ನು ಹೊಂದಿದ್ದಾರೆ.

    ಬಜೆಟ್​ ಮುನ್ನ ಯಾವ ಷೇರು ಖರೀದಿಸಬೇಕು; ಯಾವುದನ್ನು ಮಾರಾಟ ಮಾಡಬೇಕು: ಹೀಗಿದೆ ತಜ್ಞರ ಸಲಹೆ

    ಏರಿಳಿತದ ವಹಿವಾಟಿನ ನಂತರ ಫ್ಲಾಟ್​ ಆದ ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts