

Viral vedeo | ಉತ್ತರ ಪ್ರದೇಶದ ಝಾನ್ಸಿಯಲ್ಲಿ ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದ್ದ ಪರಿಣಾಮ, ಬಿಸಿಲಿನಿಂದ ಬಳಲುತ್ತಿದ್ದ ಕುಟುಂಬವೊಂದು ಬಿಸಿಲಿನ ತಾಪದಿಂದ ಪಾರಾಗಲು ಎಟಿಎಂ ಬೂತ್‌ನಲ್ಲಿ ಆಶ್ರಯ ಪಡೆದಿದೆ.
ಝಾನ್ಸಿ ನಿವಾಸಿಗಳು ವಿದ್ಯುತ್ ಕಡಿತದಿಂದ ಹೆಚ್ಚು ನಿರಾಶೆಗೊಂಡಿದ್ದಾರೆ. ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಜನರು ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉಪವಾಸ ಸತ್ಯಾಗ್ರಹ ಮತ್ತು ರಸ್ತೆ ತಡೆಗಳನ್ನು ನಡೆಸುತ್ತಿದ್ದಾರೆ. ಬಿಕೆಡಿಯಿಂದ ಆಶಿಕ್ ಚೌರಾಹಾ, ಮಿಷನ್ ಕಾಂಪೌಂಡ್ ಮತ್ತು ನಯಿ ಬಸ್ತಿ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಹೆಚ್ಚಾಗಿದೆ.
ಎಟಿಎಂ ಬೂತ್ ಒಳಗೆ ಸ್ಥಳೀಯರು ವಿಶ್ರಾಂತಿ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಅನೇಕ ಬಳಕೆದಾರರ ಗಮನ ಸೆಳೆದಿದ್ದು, ಯುಪಿ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇದನ್ನು ಹಂಚಿಕೊಂಡು ರಾಜ್ಯದ ವಿದ್ಯುತ್ ಇಲಾಖೆಯನ್ನು ಟೀಕಿಸಿದ್ದಾರೆ.
(ಏಜೆನ್ಸೀಸ್)
ಇನ್ನೂ ಈ ಬಗ್ಗೆ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದು, ನಮ್ಮ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ವಿದ್ಯುತ್ ಕಡಿತವಾಗುತ್ತಿದೆ ಎಂದು ಹೇಳಿದ್ದಾರೆ. ನಿರಂತರ ವಿದ್ಯುತ್ ಮತ್ತು ಹವಾನಿಯಂತ್ರಣ ವ್ಯವಸ್ಥೆ ಇರುವ ಏಕೈಕ ಸ್ಥಳ ಎಟಿಎಂ ಆಗಿರುವುದರಿಂದ ತಮ್ಮ ಇಡೀ ಕುಟುಂಬ ಎಟಿಎಂಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಇಲ್ಲಿಯವರೆಗೆ ಯಾರೂ ನಮ್ಮನ್ನು ತಡೆದಿಲ್ಲ, ಯಾರಾದರೂ ನಮ್ಮನ್ನು ನಿರ್ಬಂಧಿಸಿದರೆ, ನಾವು ರಸ್ತೆಯ ಮೇಲೆ ಮಲಗಬೇಕಾಗುತ್ತದೆ ಎಂದು ಹೇಳಿದ್ದಾರೆ.