More

  ಚನ್ನಪಟ್ಟಣ ಬೈಎಲೆಕ್ಷನ್​ನಲ್ಲಿ ಸ್ಫರ್ಧೆ; ಯು-ಟರ್ನ್​ ಹೊಡೆದ್ರಾ ಡಿಸಿಎಂ ಡಿ.ಕೆ. ಶಿವಕುಮಾರ್​?

  ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರಾದ ಎಚ್​.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಬಿಜೆಪಿ-ಜೆಡಿಎಸ್​, ಕಾಂಗ್ರೆಸ್​ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೂ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್​ ಇದೀಗ ಉಲ್ಟಾ ಹೊಡೆದಿದ್ದಾರೆ.

  ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ಯಾಕೆ ಉಪಚುನಾವಣೆ ನಡೆಯುತ್ತದೆ. ನಾನು ಕನಕಪುರದ ಶಾಸಕ ಪಕ್ಷದ ಅಧ್ಯಕ್ಷನಾಗಿ ನನ್ನ ಮೇಲೆ ಜವಾಬ್ದಾರಿ ಇದೆ. ಇದೂ ನನ್ನದೇ ಕ್ಷೇತ್ರ, ನನ್ನದೇ ನಾಯಕತ್ವ. ಸಿದ್ದರಾಮಯ್ಯ ಹಾಗೂ ನಾನು ಚುನಾವಣೆ ನಡೆಸುತ್ತೇವೆ ಎಂದು ಹೇಳುವ ಮೂಲಕ ಯು-ಟರ್ನ್​ ಹೊಡೆದಿದ್ದಾರೆ.

  Dk Shivakumar

  ಇದನ್ನೂ ಓದಿ: ಯೋಗ ದಿನದಂದು ಮಹಿಳೆಯರ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಪ್ರಧಾನಿ ಮೋದಿ; ಬಳಿಕ ಹೇಳಿದ್ದಿಷ್ಟು

  ಬುಧವಾರ (ಜೂನ್ 19) ರಂದು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಕನಕಪುರದ ಸಾತನೂರಿನ ಒಂದು ಭಾಗ ಚನ್ನಪಟ್ಟಣದಲ್ಲಿದೆ. ನನಗೆ ರಾಜಕೀಯವಾಗಿ ಜೀವ ಕೊಟ್ಟ ತಾಲ್ಲೂಕು ಇದು. ಐ ಲವ್​ ಅಂಡ್​ ವಾಂಟ್ ಟು ಡೆವೆಲಪ್ ಚನ್ನಪಟ್ಟಣ ಈ ಮೂಲಕವಾದರು ಇಲ್ಲಿನ ಜನರ ಋಣ ತೀರಿಸಬೇಕು ಎಂದು ಹೇಳಿದ್ದರು.

  ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಕ್ಷೇತ್ರದ ಜನರ ಮೇಲೆ ನನಗೆ ಪ್ರೀತಿಯಿದೆ. ಆ ಜನರ ಋಣ ತೀರಿಸಬೇಕು. ಕನಕಪುರಕ್ಕಿಂತ ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ. ಇವತ್ತು ಅಲ್ಲಿನ ದೇವಸ್ಥಾನಗಳ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಮತದಾರರ ಭೇಟಿ ಮಾಡಿ ಮಾತನಾಡುತ್ತೇನೆ. ಮತದಾರರು ನನ್ನ ಬಗ್ಗೆ ಒಲವು ಇಟ್ಟುಕೊಂಡರೆ ವಿಧಿನೆ ಇಲ್ಲಾ. ನಮ್ಮ ಪಕ್ಷದ ನಾಯಕರು, ಮತದಾರರು ಏನು ಹೇಳ್ತಾರೆ ಅದನ್ನ ಕೇಳುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸ್ಪರ್ಧೆಯ ಸುಳಿವು ನೀಡಿದ್ದರು. ಇದೀಗ ತಾವು ಸ್ಪರ್ಧಿಸುವುದಿಲ್ಲ ಎಂದು ಹೇಳುವ ಮೂಲಕ ಯು-ಟರ್ನ್​ ಹೊಡೆದ್ರಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

  See also  ಆಸೀಸ್ ಪ್ರವಾಸದಲ್ಲಿ ಮಿಂಚಿದ 6 ಕ್ರಿಕೆಟಿಗರಿಗೆ ಭರ್ಜರಿ ಗಿಫ್ಟ್​ ಕೊಟ್ಟ ಮಹೀಂದ್ರಾ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts