More

  ರಿಯಾಯಿತಿ ಟಿಕೆಟ್‌ ನೀಡದ ಕಂಡಕ್ಟರ್‌ಗಳು: ಡಿಪೋ ಮ್ಯಾನೇಜರ್‌, ಡಿಸಿಗೆ ಗ್ರಾಹಕರ ಆಯೋಗ ದಂಡ

  ಕಾರವಾರ: ಎನ್‌ಡಬ್ಲುಕೆಆರ್‌ಟಿಸಿ ಕಂಡಕ್ಟರ್‌ಗಳು ಹಿರಿಯ ನಾಗರಿಕರಿಗೆ ರಿಯಾಯಿತಿ ಟಿಕೆಟ್ ನೀಡದೇ ಸೇವಾ ನ್ಯೂನತೆ ಎಸಗಿದ ಬಗ್ಗೆ ನಿಗಮದ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಕುಮಟಾ ಹಾಗೂ ದಾಂಡೇಲಿ ಡಿಪೋ ಮ್ಯಾನೇಜರ್‌ಗಳಿಗೆ 3 ಸಾವಿರ ರೂ. ದಂಡ ವಿಧಿಸಿ ಜಿಲ್ಲಾಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
  ದಾಂಡೇಲಿಯ ದಾಮೋದರ ಎಂಬುವರು ದೂರು ನೀಡಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಡಾ.ಮಂಜುನಾಥ ಎಂ. ಬಮ್ಮನಕಟ್ಟಿ ಹಾಗೂ ಸದಸ್ಯೆ ನೈನಾ ಕಾಮಟೆ ದಂಡ ವಿಽಸಿದ್ದು, ಕಂಡಕ್ಟರ್‌ಗಳು ಸಾರ್ವನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
  ದೂರುದಾರರಿಗೆ ಸಿಗಬೇಕಾದ ಹಿರಿಯ ನಾಗರಿಕರ ರಿಯಾಯಿತಿಯ ಹತ್ತುಪಟ್ಟು ಮೊತ್ತ ಪಾವತಿಸಬೇಕು. ಅಲ್ಲದೇ ಪ್ರಕರಣದ ಖರ್ಚುವೆಚ್ಚವಾಗಿ ದೂರದಾರರಿಗೆ 3ಸಾವಿರಗಳನ್ನು ಈ ಎಲ್ಲ ಅಧಿಕಾರಿಗಳು ಜಂಟಿಯಾಗಿ ಮತ್ತು ವೈಯಕ್ತಿಕವಾಗಿ ಪಾವತಿಸುವಂತೆ ಆಯೋಗ ಸೂಚಿಸಿದೆ.

  ವಿಮೆ ಪಾವತಿಗೆ ಆದೇಶ:

  ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆ ಹೊಂದಿ ಮೃತಪಟ್ಟ ಗ್ರಾಹಕರಿಗೆ 2 ಲಕ್ಷ ರೂ. ವಿಮೆಯ ಪರಿಹಾರವನ್ನು ತಕ್ಷಣ ವಿತರಿಸಬೇಕು. ಅಲ್ಲದೆ, ಪರಿಹಾರವಾಗಿ 45 ಸಾವಿರ ರೂ. ನೀಡುವಂತೆ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
  ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ಬೊಮ್ಮಯ್ಯ ನಾಯಕ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಅಗಸೂರಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಈ ಖಾತೆ ಮೂಲಕ ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆಯಡಿ ವಿಮೆ ಪಡೆದಿದ್ದರು. ವಿಮೆಯ ಕಂತಾಗಿ ಪ್ರತಿ ವರ್ಷ 12 ರೂ.ಗಳನ್ನು ಪಾವತಿಸಿದ್ದರು. ಆದರೆ, ಕಂಪನಿ ವಿಮಾ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮೃತರ ಪತ್ನಿ ಆಯೋಗದ ಮೊರೆ ಹೋಗಿದ್ದರು.
  ಪರಿಶೀಲಿಸಿದ ಆಯೋಗ ಅಪಘಾತ ವಿಮೆ 2 ಲಕ್ಷ ರೂ.ಗಳನ್ನು ವಾರ್ಷಿಕ ಶೇ.12ರ ಬಡ್ಡಿಯೊಂದಿಗೆ ಪಾವತಿಸಬೇಕು. ದೂರುದಾರರಿಗೆ ಪರಿಹಾರವಾಗಿ35 ಸಾವಿರ ರೂ. ಪ್ರಕರಣದ ಖರ್ಚು ವೆಚ್ಚಕ್ಕಾಗಿ 10 ಸಾವಿರ ರೂ.ಗಳನ್ನು ನೀಡುವಂತೆ ಆದೇಶಿಸಿದೆ.

  See also  ಎರಡೂವರೆ ವರ್ಷ ಕಂದಮ್ಮನ ಸಾಧನೆ:ಇಂಡಿಯನ್ ಬುಕ್ ಆಫ್ ರೆಕಾರ್ಡ್
  https://www.vijayavani.net/16-lakhs-to-the-family-of-the-dead-biker

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts