ತುಂಬೆ ವೆಂಟೆಡ್​ ಡ್ಯಾಂನಲ್ಲಿ ನೀರಿನ ಮಟ್ಟಗಣನೀಯ ಕುಸಿತ

Oplus_131072
Oplus_131072
Published on

ಮಂಗಳೂರು: ತುಂಬೆ ವೆಂಟೆಡ್​ ಡ್ಯಾಂನಲ್ಲಿ ನೀರಿನ ಮಟ್ಟಗಣನೀಯ ಕುಸಿತ ಕಂಡಿದೆ. ಏಳು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷದಂತೆಯೇ ಈ ವರ್ಷವೂ ಮೇ.9 ಕ್ಕೆ 3.94 ಮೀ.ಗೆ ನೀರಿನ ಮಟ್ಟ ಇದೆ. ನೇತ್ರಾವತಿ ನದಿಯಲ್ಲಿ ಜಲ ಮಟ್ಟ ಇಳಿಕೆಯಾದ ಕಾರಣ ನಗರದಲ್ಲಿ ನೀರಿನ ರೇಶನಿಂಗ್​ ಆರಂಭಗೊಂಡಿದ್ದು, ದಿನ ಬಿಟ್ಟು ದಿನ ನೀರು ಪೂರೈಕೆ ಯೋಜನೆ ಸುಸೂತ್ರವಾಗಿ ನಡೆಯುತ್ತಿದೆ.

ಗುರುವಾರ ಬೆಂದೂರು ಸ್ಥಾವರ ವ್ಯಾಪ್ತಿಯ ಕೋರ್ಟ್​ ವಾರ್ಡ್​, ಕಾರ್​ಸ್ಟ್ರೀಟ್​, ಬಾವುಟಗುಡ್ಡೆ, ಆಕಾಶವಾಣಿ, ಪದವು, ಗೋರಿಗುಡ್ಡೆ, ಸೂಟರ್​ಪೇಟೆ, ಶಿವಭಾಗ್​, ಬೆಂದೂರು, ಕದ್ರಿ, ವಾಸ್​ ಲೇನ್​, ಕುದ್ರೋಳಿ, ಮೀನುಗಾರಿಕಾ ಬಂದರು, ಕೊಡಿಯಾಲ್​ಬೈಲ್​. ಪಡೀಲ್​ ಸ್ಥಾವರ: ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನ್ಸಿಯ, ಜಪ್ಪಿನಮೊಗರು, ಬಿಕರ್ನಕಟ್ಟೆ, ಉಲ್ಲಾಸ್​ ನಗರ, ಬಜಾಲ್​, ತಿರುವೈಲು, ವಾಮಂಜೂರು. ಶಕ್ತಿನಗರ ಟ್ಯಾಂಕ್​: ಕುಂಜತ್ತಬೈಲ್​, ಮುಗುರೋಡಿ, ಶಕ್ತಿ ನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವನಗರ, ಬೊಂದೆಲ್​, ಗಾಂಧಿನಗರ, ಶಾಂತಿನಗರ, ಕಾವೂರು. ತುಂಬೆ ಪಣಂಬೂರು ನೇರ ಮಾರ್ಗ ವ್ಯಾಪ್ತಿಯ ಕಂಕನಾಡಿ, ನಾಗುರಿ, ಪಂಪ್​ವೆಲ್​, ಬಲ್ಲೂರುಗುಡ್ಡೆ, ಪಡೀಲ್​ಗೆ ನೀರು ಪೂರೈಕೆಯಾಗಿದೆ.

ಗುರುವಾರ ತುಂಬೆ ಡ್ಯಾಂ ಮಟ್ಟ 3.94 ಹಾಗೂ ಎಎಂಆರ್​ ನೀರಿನ ಮಟ್ಟ 15.48 ಮೀಟರ್​ ಕಂಡುಬಂದಿತ್ತು. ಬುಧವಾರ ತುಂಬೆ ಡ್ಯಾಂ ಮಟ್ಟ 3.98 ಹಾಗೂ ಎಎಂಆರ್​ ನೀರಿನ ಮಟ್ಟ 15.52 ಮೀಟರ್​ ಇತ್ತು. ಈ ಎರಡು ಡ್ಯಾಂಗಳಲ್ಲಿ ಸರಾಸರಿ 0.10ಮೀ ಪ್ರತಿ ದಿನ ಇಳಿಕೆಯಾಗುತ್ತಿದೆ. ತುಂಬೆಯಲ್ಲಿ ನೀರಿನ ಮಟ್ಟ ಕುಸಿಯದಂತೆ ತಡೆಯಲು ಹರೆಕಳ ಪ್ರತಿ ದಿನ 15&20 ಎಂಎಲ್​ಡಿ ನೀರು ಪಂಪಿಂಗ್​ ಮಾಡಲಾಗುತ್ತಿದೆ. ಇದರ ಹೊರತಾಗಿಯೂ ಡ್ಯಾಂ ಮಟ್ಟ ಕುಸಿಯುತ್ತಿದೆ.

---

ತುಂಬೆ ಹಾಗೂ ಎಎಂಆರ್​ ಡ್ಯಾಂಗಳ ನೀರಿನ ಮಟ್ಟ ಕುಸಿತವಾಗುತ್ತಿದೆ. ಈ ಮಧ್ಯೆ ಹರೆಕಳದಿಂದ ತುಂಬೆಗೆ ನಿರಂತರ ನೀರು ಪಂಪಿಂಗ್​ ಮಾಡಲಾಗಿತ್ತಿದೆ. ನೀರಿನ ಕುಸಿತದ ನಡುವೆಯೂ ಪ್ರತಿ ದಿನ ತುಂಬೆ ಡ್ಯಾಂನಿ ನೀರು ಲಿಫ್ಟ್​ ಮಾಡಿಪೂರೈಕೆಯಾಗುತ್ತಿದೆ. ಸಧ್ಯಕ್ಕೆ ನೀರಿನ ರೇಷನಿಂಗ್​ ಚಾಲ್ತಿಯಲ್ಲಿದ್ದು, ಮಳೆಯಾಗುವ ವರೆಗೆ ಹೀಗೆಯೇ ಮುಂದುವರಿಯಲಿದೆ.

> ಸುಧೀರ್​ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net