

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಾದ ಭ್ರಷ್ಟಾಚಾರ ಪ್ರಕರಣಗಳನ್ನೂ ನಮ್ಮ ಸರ್ಕಾರ ತನಿಖೆಗೆ ಒಳಪಡಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ತಿಳಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಚಾಟಿ ಬೀಸಿದೆ.
ಹಿಂದಿನ ಬಿಜೆಪಿಯ 40% ಸರ್ಕಾರದ 100% ಭ್ರಷ್ಟಾಚಾರದ ಕತೆ ಇದು. ಬಿಜೆಪಿ ಅಡಳಿತವೆಂದರೆ ಭ್ರಷ್ಟಾಚಾರದ ಅಕ್ಷಯ ಪಾತ್ರೆ ಇದ್ದಂತೆ, ಬಗೆದಷ್ಟೂ ಹೊರಬರುತ್ತದೆ. ರಾಯಚೂರು ಕೃಷಿ ವಿವಿಯ ಡಿಜಿಟಲ್ ಸಾಮಗ್ರಿ ಖರೀದಿಯಲ್ಲಿ ಮಾರುಕಟ್ಟೆ ದರಕ್ಕಿಂತ 200% ವರೆಗೂ ಹೆಚ್ಚು ಬೆಲೆ ನಿಗದಿ ಮಾಡಿ ಖರೀದಿಸಲಾಗಿದೆ. ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಇರುವ KKRDB ಹಣವನ್ನು ಭ್ರಷ್ಟರ ಕಲ್ಯಾಣಕ್ಕೆ ಬಳಸಿದ್ದೇ ಬಿಜೆಪಿ ಸಾಧನೆ ಎಂದು ಕಿಡಿಕಾರಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಯಚೂರು ಕೃಷಿ ವಿವಿಗೆ ಡಿಜಿಟಲ್ ಸಾಮಗ್ರಿಗಳನ್ನು ಖರೀದಿಸಿದ ದರಪಟ್ಟಿ. ಮಾರುಕಟ್ಟೆ ದರಕ್ಕಿಂತ 200% ಹೆಚ್ಚು ಮೊತ್ತಕ್ಕೆ ಖರೀದಿಸಿದ ಸಾಮಗ್ರಿಗಳು ಬಂಗಾರದಿಂದ ಮಾಡಿದ್ದವೇ. ಬಗೆದಷ್ಟೂ ಬಯಲಾಗುವ ಬಿಜೆಪಿಯ ಎಲ್ಲಾ ಭ್ರಷ್ಟಾಚಾರಗಳನ್ನೂ ತನಿಖೆಗೆ ಒಳಪಡಿಸಲಿದೆ ನಮ್ಮ ಸರ್ಕಾರ. ಜನರ ತೆರಿಗೆ ಹಣದ ಒಂದೊಂದು ಪೈಸೆಗೂ ಲೆಕ್ಕ ಪಡೆಯುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ ತಿಳಿಸಿದೆ.