More

    ಮಿಜೋರಾಂ ವಿಧಾನಸಭೆ ಚುನಾವಣೆ; ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

    ಮಿಜೋರಾಂ: ವರ್ಷಾಂತ್ಯದಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿರುವ ಮಿಜೋರಾಂನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದ್ರಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್​ ತುಸು ಮುಂದಿದೆ ಎಂದು ಹೇಳಬಹುದು. ಮಿಜೋರಾಂ ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಇಂದು (ಅಕ್ಟೋಬರ್ 16) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    40 ಸದಸ್ಯಬಲದ ಮಿಜೋರಾಂ ವಿಧಾನಸಭೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದೆ. 39 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್​ ಹಾಲಿ ಐವರು ಶಾಸಕರ ಪೈಕಿ ನಾಲ್ವರಿಗೆ ಟಿಕೆಟ್​ ನೀಡಿದ್ದು, ಓರ್ವ ಅಭ್ಯರ್ಥಿಯನ್ನು ಬದಲಿಸಿದೆ. ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.

    2024ರ ಲೋಕಸಭೆ ಚುನಾವಣೆಗೆ ಸೆಮಿಫೈನಲ್​ ಎಂದು ಪರಿಗಣಿಸಲಾಗಿರುವ ಪಂಚರಾಜ್ಯ ಎಲೆಕ್ಷನ್​ ಬಿಜೆಪಿ ಹಾಗೂ ಕಾಂಗ್ರೆಸ್​ ಪಾಲಿಗೆ ದೊಡ್ಡ ಅಗ್ನಿಪರೀಕ್ಷೆ ಎಂದು ಹೇಳಬಹುದು. ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮತದಾನದ ದಿನಾಂಕಗಳು ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts