

ಬದಿಯಡ್ಕ: ಶಬರಿಮಲೆ ಚಿನ್ನ ಕಳವು ವಿವಾದಕ್ಕೆ ಸಂಬಂಧಿಸಿ ದೇವಸ್ವಂ ಸಚಿವ ವಿ.ಎನ್.ವಾಸವನ್ ಹಾಗೂ ದೇವಸ್ವಂ ಬೋರ್ಡ್ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಮಾತನಾಡಿ, ಕೋಟ್ಯಂತರ ಭಕ್ತರ ನಂಬಿಕೆಗೆ ದ್ರೋಹವೆಸಗಿದ ಸಚಿವರು ಹಾಗೂ ಬೋರ್ಡ್ ಅಧ್ಯಕ್ಷರು ಅಕ್ಷಮ್ಯ ಅಪರಾಧವೆಸಗಿದ್ದಾರೆ. ದೇವರ ಅಸ್ತಿತ್ವವನ್ನೇ ನಂಬದ ಎಡಪಕ್ಷ ಇನ್ನೆಲ್ಲಾ ದೇವಾಲಯಗಳನ್ನು ಕೊಳ್ಳೆ ಹೊಡೆಯದಿರದು. ಇಂಥವರು ಜಬಾಬ್ದಾರಿ ವಹಿಸಬಾರದು. ಕೂಡಲೇ ರಾಜಿನಾಮೆ ನೀಡಬೇಕು ಎಂದರು.
ಮಂಡಲ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ ಮಾತನಾಡಿದರು. ನೇತಾರರಾದ ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಎಂ.ಅಬ್ಬಾಸ್, ಚಂದ್ರಹಾಸನ್, ರಾಮ ಪಟ್ಟಾಜೆ, ಕುಮಾರನ್ ನಾಯರ್, ಸಿರಿಲ್ ಡಿಸೋಜ, ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್ ನಾಯರ್, ಶಾಫಿ ಗೋಳಿಯಡಿ, ರಜನಿ, ನಿಜೀಷ್ ಕೆ.ಎಂ., ವಿನ್ಸಂಟ್ ವಿದ್ಯಾಗಿರಿ ಮೊದಲಾದವರು ಇದ್ದರು.