ಕರೊನಾ ಹಾಟ್ ಸ್ಪಾಟ್ ಆಯ್ತು ಕೆಪಿಸಿಸಿ, ಅಂತರವಿಲ್ಲದೆ ಇದೆಂಥಾ ಅವಾಂತರ?

kpcc protest 1
Published on

ಬೆಂಗಳೂರು: ಕರೊನಾ ನಿಯಂತ್ರಣ ಹಿನ್ನೆಲೆ ಕರ್ಫ್ಯೂ ಜಾರಿಯಲ್ಲಿದ್ದರೂ ಕೆಪಿಸಿಸಿ ಕಚೇರಿ ಆವರಣದಲ್ಲಿ ಇಂದು(ಸೋಮವಾರ) ಬೆಳಂಬೆಳಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕಿಕ್ಕಿರಿದು ತುಂಬಿದ್ದರು.

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಮ್ಮಿಕೊಂಡ ಪ್ರತಿಭಟನೆ ಅಂಗವಾಗಿ ಕಾಂಗ್ರೆಸ್​ ಸೈಕಲ್​ ಜಾಥಾ ನಡೆಸಿದೆ. ಈ ಜಾಥಾ ನೆಪದಲ್ಲಿ ಕೆಪಿಸಿಸಿ ಕಚೇರಿ ಬಳಿ ಸೇರಿದ್ದ ಜನಜಾತ್ರೆ ಕರೊನಾ ಹಾಟ್​ ಸ್ಪಾಟ್​ನಂತೆ ಕಂಡುಬಂತು. 50ಕ್ಕೂ ಹೆಚ್ಚು ಜನ ಸೇರಬಾರದು ಎಂಬ ನಿಯಮ ಇದ್ದರೂ ಕೆಪಿಸಿಸಿ ಗಾಳಿಗೆ ತೂರಿದ್ದು, ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯನ್ನೂ ತಂದೊಡ್ಡಿತು.

ಜಾಥಗೂ ಮೊದಲೇ ಕ್ವೀನ್ಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇತ್ತು. ಈಗ ಸೈಕಲ್​ ಜಾಥಾ ನೆಪದಲ್ಲಿ ಸಾವಿರು ಮಂದಿ ಒಮ್ಮೆಲೆ ಹೊರಟಿದ್ದರಿಂದ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಮತ್ತಷ್ಟು ಹೆಚ್ಚಾಯಿತು.

ಇದಕ್ಕೂ ಮುನ್ನ ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಗೆ ಸಿದ್ದರಾಮಯ್ಯ ಸೈಕಲ್​ ಮೂಲಕವೇ ಹೊರಟರು. ಈ ವೇಳೆ ಜಮೀರ್ ಅಹಮದ್, ಪ್ರಕಾಶ್ ರಾಠೋಡ್ ಸಾಥ್ ನೀಡಿದರು. ಸದಾಶಿವ ನಗರದ ತಮ್ಮ ನಿವಾಸದಿಂದ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಕಚೇರಿಗೆ ಸೈಕಲ್​ನಲ್ಲಿ ಬಂದರು.

ಒಟ್ಟಾರೆ ರಸ್ತೆಯುದ್ದಕ್ಕೂ ಜಾಥಾ ನೆಪದಲ್ಲಿ ಕಾಂಗ್ರೆಸ್​ ನಾಯಕರ ಹಾದಿಯಾಗಿ ಕಾರ್ಯಕರ್ತರು ಕೂಡ ದೈಹಿಂಕ ಅಂತರವಿಲ್ಲದೆ, ಕರೊನಾ ನಿಯಮವನ್ನೂ ಪಾಲಿಸದೆ ಸಂಚರಿಸಿದ್ದು ಆತಂಕಕಾರಿ ವಿಷಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net