

ಕಾರವಾರ: ಗ್ಯಾರಂಟಿ ಯೋಜನೆ ಜಾರಿ ಮಾಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದೇವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಸತೀಶ ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಇದುವರೆಗೆ ಚುನಾವಣೆ, ಜಾತಿ, ಧರ್ಮ ವಿಚಾರವಾಗಿ ನಡೆಯುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆ ಜನರ ಅವಶ್ಯಕತೆಗಳ ವಿಚಾರವಾಗಿ ನಡೆದಿತ್ತು. ಕಾಂಗ್ರೆಸ್ 5 ಗ್ಯಾರಂಟಿ ನೀಡಿತ್ತು. ಎಲ್ಲ 5 ಭರವಸೆಗಳನ್ನು ಈಡೇರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ವಿಶ್ವಾಸ ಗಳಿಸಿದೆ. ಜನರು ನಮ್ಮನ್ನು ನಂಬುತ್ತಿದ್ದಾರೆ.
ಶೇ.98 ರಷ್ಟು ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪಿದೆ.ಬಡವರ ಕೊಳ್ಳುವ ಸಾಮರ್ಥ್ಯ ಹೆಚ್ಚಿದೆ. ಆರ್ಥಿಕ ಸುಧಾರಣೆ ಕಾರಣವಾಗಿದೆ.
ಎಲ್ಲ ಸರ್ಕಾರಗಳು ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಆದರೆ, ನಮ್ಮ ಸರ್ಕಾರ ಯಶಸ್ವಿಯಾಗಿ ಈಡೇರಿಸಿದೆ. ಇದರಿಂದ ಕಾರ್ಯಕರ್ತರಿಗೆ ಹುಮ್ಮಸ್ಸು ಬಂದಿದೆ. ಯಾರ ಮನೆಗಾದರೂ ಹೋಗಿ ಮತ ಕೇಳುವ ಧೈರ್ಯ ಬಂದಿದೆ ಎಂದರು.
ಯೋಜನೆಗಳ ಸಮಿತಿ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ,
ಅಣಪ್ಪ ನಾಯ್ಕ, ರಾಜೇಂದ್ರ ರಾಣೆ, ಅಶೋಕ ಗೌಡ, ಪಾಂಡುರಂಗ ಗೌಡ, ಒಬಿಸಿ ಸೆಲ್ ಜಿಲ್ಲಾ ಉಪಾಧ್ಯಕ್ಷ, ನಾಗರಾಜ ಮುರ್ಡೇಶ್ವರ, ಶಂಕರ ಇಡಗುಂದಿ, ಎಂ.ಟಿ.ಗೌಡ, ಚಂದ್ರಕಾಂತ ಆಗೇರ, ರಾಜೇಶ ನಾಯ್ಕ, ಗಿರೀಶ ಪಟಗಾರ, ಸ್ನೇಹಾ ಹಳದನಕರ್, ಬಾಬು ಶೇಖ್, ರಮೇಶ ಮುದ್ಗೇಕರ್, ನೂತನ ಜೈನ್, ಶಾಂತಾರಾಮ ನಾಯ್ಕ, ವೈಭವ ನಾಯ್ಕ, ಗಜು ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.
https://www.vijayavani.net/bhatkal-man-arrested-for-theft-in-gangolliಇದನ್ನೂ ಓದಿ: ಗಂಗೊಳ್ಳಿ ಕಳ್ಳತನ, ಭಟ್ಕಳದವನ ಬಂಧನ