More

    ಮೇಲ್ಮನೆ ಕೈ ನಾಯಕತ್ವ ತ್ಯಾಗ; ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬದ್ಧ

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿರಿಯ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸ್ಪರ್ಧೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಖರ್ಗೆ ಈ ನಿರ್ಧಾರ ಕೈಗೊಂಡಿರು. ಪಕ್ಷದಲ್ಲಿ ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಅನುಗುಣವಾಗಿ ತಾವು ಮೇಲ್ಮನೆಯ ಪ್ರತಿಪಕ್ಷದ ಸ್ಥಾನವನ್ನು ತೊರೆಯುತ್ತಿರುವುದಾಗಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಶುಕ್ರವಾರ ರಾತ್ರಿ ಬರೆದ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ. ಉದಯಪುರದಲ್ಲಿ ನಡೆದ ಚಿಂತನ ಶಿಬಿರದಲ್ಲಿ ಒಬ್ಬ ವ್ಯಕ್ಯಿ ಒಂದು ಹುದ್ದೆ ನಿಯಮವನ್ನು ಅಂಗೀಕರಿಸಲಾಗಿತ್ತು.

    ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷರೂ ಆಗಿರುವ ಸೋನಿಯಾ, ಈಗ ರಾಜ್ಯಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬೇರೆಯವರನ್ನು ನೇಮಿಸಿ ಅದನ್ನು ಸಭಾಧ್ಯಕ್ಷರಿಗೆ ತಿಳಿಸಲಿದ್ದಾರೆ. ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್ ಹೆಸರು ಈ ಹುದ್ದೆಗೆ ಕೇಳಿ ಬರುತ್ತಿವೆ. 25 ವರ್ಷದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಗಾಂಧಿಯೇತರ ಅಧ್ಯಕ್ಷರನ್ನು ಹೊಂದಲಿದ್ದು, ಖರ್ಗೆ, ಸಂಸದ ಶಶಿ ತರೂರ್ ಮತ್ತು ಜಾರ್ಖಂಡ್​ನ ಮಾಜಿ ಸಚಿವ ಕೆ.ಎನ್. ತ್ರಿಪಾಠಿ ಅವರೂ ನಾಮಪತ್ರ ಸಲ್ಲಿಸಿದ್ದರು. ಆದರೆ, ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿರುವುದರಿಂದ ಖರ್ಗೆ ಮತ್ತು ತರೂರ್ ನಡುವೆ ನೇರ ಹಣಾಹಣಿ ಇದೆ. ತ್ರಿಪಾಠಿ ಸೂಚಕರಲ್ಲಿ ಒಬ್ಬರ ಸಹಿ ಹೊಂದಾಣಿಕೆಯಾಗುತ್ತಿಲ್ಲ ಹಾಗೂ ಇನ್ನೊಬ್ಬರ ಸಹಿ ಪುನರಾವರ್ತನೆ ಆಗಿರುವುದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಎಐಸಿಸಿ ಕೇಂದ್ರೀಯ ಚುನಾವಣಾಧಿಕಾರಿ ಮಧುಸೂದನ ಮಿಸ್ತ್ರಿ ಶನಿವಾರ ತಿಳಿಸಿದ್ದಾರೆ.

    ಪೈಲಟ್ ವಿರುದ್ಧ ಟಿಪ್ಪಣಿ

    ಮೇಲ್ಮನೆ ಕೈ ನಾಯಕತ್ವ ತ್ಯಾಗ; ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬದ್ಧಗುರುವಾರ ದೆಹಲಿಯಲ್ಲಿ ಸೋನಿಯಾರನ್ನು ಭೇಟಿಯಾದ ಸಂದರ್ಭದಲ್ಲಿ ತಮ್ಮ ಕಟ್ಟಾ ಪ್ರತಿಸ್ಪರ್ಧಿ ಸಚಿನ್ ಪೈಲಟ್ ವಿರುದ್ಧ ಮಾತನಾಡಲು ಗೆಹ್ಲೋಟ್ ಟಿಪ್ಪಣಿ ಮಾಡಿಕೊಂಡು ಹೋಗಿದ್ದು ಈಗ ಬಯಲಾಗಿದೆ. ಅವರು ಕಾಗದಪತ್ರಗಳಲ್ಲಿ ‘ಎಸ್​ಪಿ’ ಎಂದು ನಮೂದಿಸಿದ್ದು ಮಾಧ್ಯಮ ಛಾಯಾಗ್ರಾಹರೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದು ಸಚಿನ್ ಪೈಲಟ್​ರ ಹೆಸರಿನ ಮೊದಲಕ್ಷರಗಳಾಗಿದ್ದು ಅವರನ್ನು ಕುರಿತೇ ಸೋನಿಯಾರಿಗೆ ದೂರು ಸಲ್ಲಿಸಲು ಗೆಹ್ಲೋಟ್ ಸಿದ್ಧರಾಗಿದ್ದರು ಎಂದು ವಿಶ್ಲೇಷಿಸಲಾಗಿದೆ.

    ಮುಖ್ಯಮಂತ್ರಿ ಸ್ಥಾನದಲ್ಲಿ ಗೆಹ್ಲೋಟ್ ಮುಂದುವರಿಕೆ

    ಮೇಲ್ಮನೆ ಕೈ ನಾಯಕತ್ವ ತ್ಯಾಗ; ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬದ್ಧಪಕ್ಷದ ಹೈಕಮಾಂಡ್ ಮಾತಿಗೆ ಮಣಿದು ಅಧ್ಯಕ್ಷ ಸ್ಥಾನದ ರೇಸ್​ನಿಂದ ಹಿಂದೆ ಸರಿದ ರಾಜಸ್ಥಾನ ಮುಖ್ಯಮಂತ್ರಿ ಅಶೋೕಕ್ ಗೆಹ್ಲೋಟ್, ಸಿಎಂ ಸ್ಥಾನದಲ್ಲಿ ಮುಂದುವರಿ ಯುವ ಸುಳಿವು ನೀಡಿದ್ದಾರೆ. ಮುಂದಿನ ವರ್ಷದ ಬಜೆಟ್​ಗೆ ಸಲಹೆಗಳನ್ನು ಕಳಿಸುವಂತೆ ಸಾರ್ವಜನಿಕೆರಿಗೆ ಗೆಹ್ಲೋಟ್ ಮನವಿ ಮಾಡಿರುವುದರಿಂದ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿಯುವುದರ ಸೂಚನೆಯಾಗಿದೆ. ಅಂತೆಯೇ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಗೆಹ್ಲೋಟ್ ನಿಷ್ಠ್ಠು ಘೋಷಿಸಿರುವುದೂ ಗಮನಾರ್ಹವಾಗಿದೆ. ಪಕ್ಷಾಧ್ಯಕ್ಷ ಹುದ್ದೆಯ ಆಕಾಂಕ್ಷಿಯಾಗಿ ಹಲವು ವಿದ್ಯಮಾನಗಳ ನಡುವೆ ದೆಹಲಿಯಲ್ಲಿದ್ದ ಗೆಹ್ಲೋಟ್ ಶನಿವಾರ ರಾಜ್ಯಕ್ಕೆ ಮರಳಿ ಸಿಎಂ ಕಾರ್ಯಭಾರವನ್ನು ಪುನರಾರಂಭಿಸಿದರು. ಬಿಕಾನೇರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ, ತಾವೇ ಮುಖ್ಯಮಂತ್ರಿ ಆಗಿ ಮುಂದುವರಿಯುವ ಸುಳಿವನ್ನು ಕೊಟ್ಟರು.

    ನಾಗಪುರದಲ್ಲಿ ಶಶಿ ತರೂರ್ ಪ್ರಚಾರ

    ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ನಂತರ ಮಹಾರಾಷ್ಟ್ರದ ನಾಗಪುರಕ್ಕೆ ಬಂದಿರುವ ಶಶಿ ತರೂರ್, ಶನಿವಾರ ಪ್ರಚಾರ ಕಾರ್ಯ ನಡೆಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕೃತ ಅಭ್ಯರ್ಥಿ ಎಂಬುದೇನೂ ಇಲ್ಲ. ಅಧ್ಯಕ್ಷೀಯ ಚುನಾವಣೆಯಲ್ಲಿ ಗಾಂಧಿ ಕುಟುಂಬ ತಟಸ್ಥವಾಗಿರುತ್ತದೆ ಎಂದು ಆ ಕುಟುಂಬದವರು ಹೇಳಿದ್ದಾರೆ ಎಂದರು. ಖರ್ಗೆ ಜೊತೆ ವೈರತ್ವವೇನೂ ಇಲ್ಲ. ಹಿರಿಯ ಮುಖಂಡರಾದ ಅವರು ಕಾಂಗ್ರೆಸ್​ನ ಭೀಷ್ಮ ಪಿತಾಮಹ. ನಾವು ಪ್ರತಿಸ್ಪರ್ಧಿಗಳಲ್ಲ, ಸಹೋದ್ಯೋಗಿಗಳು ಎಂದರು. ಈ ಮಧ್ಯೆ, ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ತಟಸ್ಥ ಧೋರಣೆ ತಳೆದಿರುವ ಸೋನಿಯಾ ಪರಿವಾರದವರು ಮತದಾನದಿಂದ ದೂರವುಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts