ಚುನಾವಣಾ ಆಯೋಗ ಮೋದಿ ಮನೆ ಕಾವಲಿಗೆ ಇರುವ ನಾಯಿಯಂತೆ ವರ್ತಿಸುತ್ತಿದೆ; EC ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ Congress MLC

Bhai Jagtap
Published on

ಮುಂಬೈ: ಈಚೆಗೆ ಮುಕ್ತಾಯಗೊಂಡ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Assembly Election) ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್​ ನೇತೃತ್ವದ ಎಂವಿಎ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ. ಇತ್ತ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಇವಿಎಂ (EVM) ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕಾಂಗ್ರೆಸ್​ (Congress) ಈ ಬಗ್ಗೆ ಪತ್ರ ಬರೆದಿದ್ದು, ಇದೀಗ ಕಾಂಗ್ರೆಸ್​ನ ವಿಧಾನಪರಿಷತ್​ ಸದಸ್ಯರೊಬ್ಬರು (Congress MLC) ಚುನಾವಣಾ ಆಯೋಗದ (Election Commission) ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ.

ಮುಂಬೈನಲ್ಲಿ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​ ವಿಧಾನಪರಿಷತ್ ಸದಸ್ಯ (Congress MLC) ಭಾಯ್​ ಜಗತಾಪ್ (Bhai Jagtap)​, ನಮ್ಮದು ಅತಿದೊಡ್ಡ ಪ್ರಜಾಪ್ರಭುತ್ವ. ಚುನಾವಣೆ ಕುರಿತು ಪ್ರಶ್ನೆಗಳಿದ್ದರೆ ಚುನಾವಣಾ ಆಯೋಗವೇ ಉತ್ತರಿಸಬೇಕಿದೆ. ಚುನಾವಣಾ ಆಯೋಗ ಮೋದಿಯವರ ಬಂಗಲೆಯ ಹೊರಗೆ ಕೂತಿರುವ ನಾಯಿಯಂತೆ ವರ್ತಿಸುತ್ತಿದೆ. ಇದಲ್ಲದೆ ಸರ್ಕಾರಿ ತನಿಖಾ ಸಂಸ್ಥೆಗಳು ಕೂಡ ಇದೇ ರೀತಿ ವರ್ತಿಸುತ್ತಿವೆ.

ನನ್ನ ಹೇಳಿಕೆಗೆ ನಾನು ಸ್ವಲ್ಪವೂ ಕ್ಷಮೆಯಾಚಿಸಲ್ಲ. ಆಯೋಗವು ಮೋದಿ ಮತ್ತು ಇತರ ಮಂತ್ರಿಗಳ ಒತ್ತಡದಲ್ಲಿ ಕೆಲಸ ಮಾಡುತ್ತಿರುವುದು ನಿಜ. ಚುನಾವಣಾ ಆಯೋಗ ಇರುವುದು ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಬಲಪಡಿಸಲು ಹೊರತು ಯಾರ ಸೇವೆ ಮಾಡಲು ಅಲ್ಲ. ಹಾಗಾಗಿ ನಾನು ಕ್ಷಮೆ ಕೇಳಲ್ಲ. ರಾಜ್ಯದ ಜನರು ಮಹಾಯುತಿ ಆಡಳಿತವನ್ನು ಸಂಪೂರ್ಣವಾಗಿ ವಿರೋಧಿಸಿದ್ದರು. ಆದ್ರೂ ಜಯ ಸಿಕ್ಕಿದೆ ಅಂದ್ರೆ, ಇದರ ಸಂಪೂರ್ಣ ಕ್ರೆಡಿಟ್ ಇವಿಎಂಗಳಿಗೆ ಸಲ್ಲುತ್ತದೆ. ಇಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್​ ವಿಧಾನಪರಿಷತ್ ಸದಸ್ಯ (Congress MLC) ಭಾಯ್​ ಜಗತಾಪ್ (Bhai Jagtap) ಆರೋಪಿಸಿದ್ದಾರೆ.

ಇತ್ತ ಜಗತಾಪ್​ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಮುಂಬೈನಲ್ಲಿ ಬಿಜೆಪಿ ನಾಯಕರು ಪೊಲೀಸರಿಗೆ ದೂರು ನೀಡಿದ್ದು, ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಶೆಹಜಾದ್​ ಪೂನಾವಾಲಾ, ಸಾಂವಿಧಾನಿಕ ಸಂಸ್ಥೆಯನ್ನು ಅವಮಾನಿಸುವುದು, ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ. ಈಗ ಅವರು ಚುನಾವಣಾ ಆಯೋಗವನ್ನ ಅನುಮಾನಿಸುತ್ತಿದ್ದಾರೆ. ಜಾರ್ಖಂಡ್, ಜಮ್ಮು-ಕಾಶ್ಮೀರ, ವಯನಾಡ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆದಾಗ ಚುನಾವಣಾ ಆಯೋಗ ಚೆನ್ನಾಗಿತ್ತು. ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ ಚೆನ್ನಾಗಿಲ್ಲ ಎಂದು ಕಿಡಿಕಾರಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net