ಮತಗಟ್ಟೆ ಅಧಿಕಾರಿಯ ಕಪಾಳಕ್ಕೆ ಹೊಡೆದ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ; Video Viral

viral video
Published on

ರಾಜಸ್ಥಾನ: ಇಲ್ಲಿನ ಡಿಯೋಲಿ-ಉನಿಯಾರ ವಿಧಾನಸಭೆ ಉಪಚುನಾವಣೆಗೆ ಬುಧವಾರ (ನ.13) ನಡೆಯುತ್ತಿದ್ದ ಮತದಾನದ ವೇಳೆ ಕಾಂಗ್ರೆಸ್​ ಬಂಡಾಯ ಅಭ್ಯರ್ಥಿ ನರೇಶ್​ ಮೀನಾ ಮತಗಟ್ಟೆ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ.

ಮತಗಟ್ಟೆಯ ಹೊರಗೆ ಚುನಾವಣಾ ಪ್ರೋಟೋಕಾಲ್ ಮೇಲ್ವಿಚಾರಣೆ ಮಾಡುತ್ತಿದ್ದ ಅಮಿತ್​ ಚೌದರಿ ಎಂಬ ಅಧಿಕಾರಿಗೆ ಹೊಡೆದಿದ್ದಾರೆ. ತಕ್ಷಣ ಅಲ್ಲಿದ್ದ ಪೊಲೀಸರು ಅಭ್ಯರ್ಥಿ ನರೇಶ್​ ಮೀನಾ ಅವರನ್ನು ತಡೆದಿದ್ದಾರೆ. ​ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​(Video Viral) ಆಗಿದೆ.

ಘಟನೆಯ ವಿವರ

ಸಮರ್ವಾಟಾ ಗ್ರಾಮದಲ್ಲಿ ತಮ್ಮ ಪಂಚಾಯತಿಯನ್ನು ಡಿಯೋಲಿ ಕ್ಷೇತ್ರದಿಂದ ಉನಿಯಾರಾಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಗ್ರಾಮದ ಜನರು ಮತದಾನವನ್ನು ಬಹಿಷ್ಕರಿಸಿದ ಘಟನೆ ನಡೆದಿದೆ. ಸಮಯ ಕಳೆದದಂತೆ ಯಾರು ಮತದಾನ ಮಾಡಲು ಬಲಿಲ್ಲ. ಆದರೆ, ಮೂವರು ಮತದಾರರನ್ನು ಮತಗಟ್ಟೆಗೆ ಕರೆದುಕೊಂದು ಬಂದು ರಹಸ್ಯವಾಗಿ ಅಧಿಕಾರಿ ಅಮಿತ್​ ಚೌದರಿ ಮತದಾನ ಮಾಡಿಸಿದ್ದಾರೆ ಎಂದು ನರೇಶ್​ ಮೀನಾ ಆರೋಪಿಸಿದ್ದಾರೆ. ಇದೇ ವಿಚಾರ ಮೀನಾ ಅವರನ್ನು ಕೆರಳಿಸಿದೆ ಎನ್ನಲಾಗಿದೆ. ಘಟನೆ ಬಳಿಕ ಸ್ಥಳ ಬಂದ ಪೊಲೀಸರು ಘಟನೆ ಮಾಹಿತಿ ಪಡೆದು ಆಭ್ಯರ್ಥಿ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಕರ್ತವ್ಯ ನಿರತ ಅಧಿಕಾರಿಗೆ ಹಲ್ಲೆ ಮಾಡಿಸ ಆರೋಪ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯನ್ನು ಸಮರ್ಥನೆ ಮಾಡಿಕೊಂಡ ನರೇನ್ ಮೀನಾ!

ತಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವ ವೀಡಿಯೊವನ್ನು ಬಿಡುಗಡೆ ಮಾಡಿದ ನರೇನ್​ ಮೀನಾ ಸರ್ಕಾರದ ಮತ್ತು ಚುನಾವಣಾ ಸಂದಂರ್ಭದಲ್ಲಿ ಅಧಿಕಾರಿಗಳು ದುರ್ವತನೆಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಚುನಾವಣಾ ಅಧಿಕಾರಿಗಳನ್ನು ಬದಲಾಯಿಸುವಂತೆ ಒತ್ತಾಯಿಸಿದರು,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net