ಉತ್ತಮ ಶಿಕ್ಷಣ ಪಡೆದು ಪಾಲಕರಿಗೆ ಕೀರ್ತಿ ತನ್ನಿ : ಟಿ.ಜಿ.ರಾಜಾರಾಮ ಭಟ್ ಸಲಹೆ

New Project (25)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಮಕ್ಕಳು ಉತ್ತಮ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋಗಿ ವೃದ್ಧಾಪ್ಯದಲ್ಲಿ ಅನ್ನ ಹಾಕಬೇಕು ಎಂದು ಬಯಸುವ ಪಾಲಕರಿಗೆ ಕೀರ್ತಿ ತರುವ ಕೆಲಸ ಮಾಡಬೇಕೇ ಹೊರತು, ಶಾಲೆಗೆ ಕೀರ್ತಿ ತರಬೇಕೆಂದು ಬಯಸುವುದಿಲ್ಲ. ಪಠ್ಯದೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಾಗ ಕೇಂದ್ರ ಸರ್ಕಾರದ ಹುದ್ದೆ ಕೈಬೀಸಿ ಕರೆಯುತ್ತದೆ ಎಂದು ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ.ರಾಜಾರಾಮ ಭಟ್ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಮಂಗಳವಾರ ಶಾಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ 20 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೈರಂಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಗ್ಗಪ್ಪ ಮಾಣೈ, ನಿರ್ದೇಶಕ ಉದಯ ಶಂಕರ್, ಪ್ರಗತಿಪರ ಕೃಷಿಕ ರಮೇಶ್ ಗಟ್ಟಿ, ಬಿಜೆಪಿ ಉಪಾಧ್ಯಕ್ಷೆ ಸುಮನ ಹರೀಶ್ ಶೆಟ್ಟಿ, ಸಮಾಜ ಸೇವಕ ಚಂದ್ರಶೇಖರ ಶೆಟ್ಟಿ ಮರಿಕ್ಕಳ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಬಂಟ್ವಾಳ ತಾಪಂ ಮಾಜಿ ಸದಸ್ಯ ಸವೀನ್ ಪಾದಲ್ಪಾಡಿ, ಕ್ಯಾಂಪ್ಕೊ ನಿರ್ದೇಶಕ ಮಹೇಶ್ ಚೌಟ, ಹವ್ಯಕ ಮಂಡಲ ಕಾರ್ಯದರ್ಶಿ ಸತ್ಯನಾರಾಯಣ ಮೂರ್ತಿ ಎಡಂಬಳ, ನಿವೃತ್ತ ಪ್ರಾಂಶುಪಾಲ ಜಯರಾಮ್ ಪೂಂಜಾ, ಉದ್ಯಮಿ ನಂದರಾಜ್ ಶೆಟ್ಟಿ ಪಿಜಿನಬೈಲ್, ಬಿಜೆಪಿ ಮಂಡಲ ಉಪಾಧ್ಯಕ್ಷ ಯಶವಂತ ದೇರಾಜೆ, ಶಶಿಧರ್ ಶೆಟ್ಟಿ ಬಾಳೇಪುಣಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಕಿರಣ್ ಗಟ್ಟಿ, ಸಂಸ್ಥೆಯ ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ, ಪ್ರಮುಖರಾದ ಶಿವಾನಂದ ಮೂಳೂರು, ಹರೀಶ್ ಶೆಟ್ಟಿ, ರಾಜೇಶ್ ಮಡಿವಾಳ, ದಕ್ಷಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿಕ್ಷಕ ಚಂದ್ರಕುಮಾರ್ ಸ್ವಾಗತಿಸಿದರು. ರಂಗರಾಜ್ ಮಾಯಿಪ್ಪಾಡಿ ವಂದಿಸಿದರು. ಶ್ರೀನಿವಾಸ ಭಟ್ ಸೆರಾಜೆ ಕಾರ್ಯಕ್ರಮ ನಿರೂಪಿಸಿದರು.

ಶಾಲೆಗೆ ರಾಜ್ಯಮಟ್ಟದಲ್ಲಿ ಹತ್ತನೇ ರ‌್ಯಾಂಕ್ ಬಂದಿರುವುದು ಸಂತಸದ ವಿಷಯ. ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗಬೇಕೆನ್ನುವ ನೆಲೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸಭಾಂಗಣ, ಸಾರ್ವಜನಿಕ ಸ್ಥಳದಲ್ಲಿ ಸನ್ಮಾನಿಸುವ ಬದಲು ಕಲಿತ ಶಾಲೆಯಲ್ಲೇ ಅಭಿನಂದಿಸಲಾಗಿದೆ. ಶಿಕ್ಷಕರು, ಆಡಳಿತ ಮಂಡಳಿ ಶ್ರಮ ಸಾರ್ಥಕ. ಮುಂದಿನ ವರ್ಷ ಇನ್ನಷ್ಟು ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾಜಿ ಅಧ್ಯಕ್ಷ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net