

ಬೆಳ್ತಂಗಡಿ: ಬಳಂಜ ಸ.ಉ.ಪ್ರೌಢಶಾಲೆಯಲ್ಲಿ ಪ್ರಾರಂಭೋತ್ಸವ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸೋಮವಾರ ಅಭಿನಂದಿಸಲಾಯಿತು.
ಪ್ರೌಢಶಾಲಾ ಪೋಷಕರ ಸಂ ಅಧ್ಯಕ್ಷ ಕೆ.ವಸಂತ ಸಾಲ್ಯಾನ್ ಉದ್ಘಾಟಿಸಿದರು. ಬಳಂಜ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಮನೋಹರ್ ಬಳಂಜ ಶುಭಹಾರೈಸಿದರು. ಎಸ್ಸೆಸ್ಸೆಲ್ಸಿ ಸಾಧಕರನ್ನು ನಗದು ಬಹುಮಾನಗಳೊಂದಿಗೆ ಗೌರವಿಸಲಾಯಿತು.
ಅಕಾಂಕ್ಷಾ ಚಾರಿಟೆಬಲ್ ಟ್ರಸ್ಟ್‌ನ ವ್ಯಾಂಕ್ಟಿವಾ ಕಂಪನಿ ವತಿಯಿಂದ ಮಕ್ಕಳಿಗೆ ಪುಸ್ತಕ, ಬ್ಯಾಗ್, ಕಿಟ್ ವಿತರಿಸಲಾಯಿತು. ಎಸ್‌ಡಿಎಂಸಿ ಉಪಾದ್ಯಕ್ಷೆ ಸುಶೀಲಾ, ಬಳಂಜ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನರಾಜ್ ಪೇರಂದ ಬೈಲ್, ಟ್ರಸ್ಟಿಗಳಾದ ಪ್ರಮೋದ್ ಜೈನ್, ರಾಕೇಶ್ ಹೆಗ್ಡೆ, ಪ್ರವೀಣ್ ಎಚ್.ಎಸ್., ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ., ಉಮಾಮಹೇಶ್ವರ ಯುವಕ ಮಂಡಲ ಅಧ್ಯಕ್ಷ ಸುಕೇಶ್ ಹಾನಿಂಜ, ಜ್ಯೋತಿ ಮಹಿಳಾ ಮಂಡಲ ಅಧ್ಯಕ್ಷೆ ಚೇತನಾ, ಬಳಂಜ ಗ್ರಾಪಂ ಸದಸ್ಯ ರವೀಂದ್ರ ಅಮೀನ್ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಲೋಚನಾ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಂಗಸ್ವಾಮಿ ಪ್ರಸ್ತಾವಿಸಿದರು. ಗೌರವ ಶಿಕ್ಷಕಿ ಕೀರ್ತಿ ನಿರೂಪಿಸಿದರು. ಶಿಕ್ಷಕ ಮಲ್ಲಿಕಾರ್ಜುನಾ ವಂದಿಸಿದರು.