

ಮಂಗಳೂರು: ಬಂಟ್ವಾಳ ತಾಲೂಕು ಕಕ್ಯೆಪದವು ಎಲ್‌ಸಿಆರ್ ಇಂಡಿಯನ್ ಇನ್‌ಸ್ಟಿಟ್ಯೂಷನ್ಸ್‌ನ ವಿದ್ಯಾರ್ಥಿನಿ, ಹರಿಶ್ಚಂದ್ರ-ಕುಶಾಲ ದಂಪತಿ ಪುತ್ರಿ ಪ್ರಾರ್ಥನಾ ಎಚ್.ಕೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 622 ಅಂಕಗಳನ್ನು ಪಡೆದು ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ ಆಕೆಯ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು. ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಪ್ರಾರ್ಥನಾ ಅಜ್ಜ ಸಂಜೀವ, ಅಜ್ಜಿ ವೇದಾವತಿ, ಪ್ರಮುಖರಾದ ಡಾ.ರಾಜಾರಾಂ, ಗಣೇಶ್, ಚೆನ್ನಪ್ಪ ಸಾಲ್ಯಾನ್, ವಿಶ್ವನಾಥ್ ಸಾಲ್ಯಾನ್, ಅಬ್ದುಲ್ ರೆಹಮಾನ್, ಬಾಬು ನಾಯಕ್, ತಿಲಕ್, ಮಹೇಶ್, ಇಸ್ಮಾಯಿಲ್ ಮೊದಲಾದವರಿದ್ದರು.